ಉಸಿರಿರುವ ತನಕ ನಿಮ್ಮ ಸೇವೆ ಮಾಡುವೆ: ಶಿಗ್ಗಾಂವಿ ಜನರಿಗೆ ಸಿಎಂ ಬೊಮ್ಮಾಯಿ ಭರವಸೆ - etv bharat kannada
🎬 Watch Now: Feature Video
ಹಾವೇರಿ: ಶಿಗ್ಗಾಂವಿ ತಾಲೂಕಿನ ಗಂಜೀಗಟ್ಟಿ ಗ್ರಾಮ ದೇವತೆಯ ಆಶೀರ್ವಾದದಿಂದ ನಾನು ಮುಖ್ಯಮಂತ್ರಿಯಾಗಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು. ಗಂಜೀಗಟ್ಟಿ ಶ್ರೀ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, 16 ವರ್ಷಗಳಿಂದ ಈ ದೇವಿಯ ಜಾತ್ರೆಗೆ ಬರುತ್ತಿದ್ದೇನೆ. ಇಲ್ಲಿಯ ಜಾತ್ರೆ ವಿಶೇಷವಾದದ್ದು ಮತ್ತು ಈ ದೇವಿಯು ಅತ್ಯಂತ ಪ್ರಸನ್ನ ರೂಪಿ ಎಂದು ಹೇಳಿದರು.
ಶಿಗ್ಗಾಂವಿ ಜನರಿಗೆ ನಾನು ಋಣಿಯಾಗಿದ್ದೇನೆ. ನಿಮ್ಮೆಲ್ಲರ ಆಶೀರ್ವಾದದಲ್ಲಿ ದೊಡ್ಡ ಶಕ್ತಿಯಿದೆ. ಶಿಗ್ಗಾಂವಿಯನ್ನು ಇನ್ನಷ್ಟು ಅಭಿವೃದ್ಧಿ ಕಾರ್ಯ ಮಾಡುವ ಅವಕಾಶ ನನಗೆ ಸಿಕ್ಕಿದೆ. ಉಸಿರು ಇರುವ ತನಕ ನಿಮ್ಮ ಸೇವೆ ಮಾಡುತ್ತೇನೆ ಎಂದರು. ಇಲ್ಲಿನ ಜನರು ಪ್ರಾಮಾಣಿಕರು, ಶ್ರಮಿಕರು ಮತ್ತು ಸಜ್ಜನರು. ಇಲ್ಲಿನ ರೈತರನ್ನು ಒಳಗೊಂಡಂತೆ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದ್ದೇನೆ. ನಿಮ್ಮ ಮತಕ್ಕೆ ಕುಂದು ತರುವ ಕೆಲಸ ಮಾಡಿಲ್ಲ. ಬದಲಾಗಿ ಗೌರವವನ್ನು ತಂದುಕೊಟ್ಟಿದ್ದೇನೆ ಎಂದು ಸಿಎಂ ನುಡಿದರು.
ಇದನ್ನೂ ಓದಿ: ಮಧ್ಯಂತರ ವರದಿ ಬಂದ ಕೂಡಲೇ ಏಳನೇ ಪರಿಷ್ಕೃತ ವೇತನ ಜಾರಿ: ಸಿಎಂ ಬೊಮ್ಮಾಯಿ