Cloud burst: ಮೇಘಸ್ಫೋಟಕ್ಕೆ ತತ್ತರಿಸಿದ ಹಿಮಾಚಲ ಪ್ರದೇಶ.. ಚರಂಡಿಯಲ್ಲಿ ಸಿಲುಕಿದ ವಾಹನಗಳು - ಚರಂಡಿಯಲ್ಲಿ ಸಲುಕಿದ ವಾಹನಗಳು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/20-07-2023/640-480-19049128-thumbnail-16x9-etv.jpg)
ಕಿನ್ನೌರ್ (ಹಿಮಾಚಲ ಪ್ರದೇಶ): ಇಲ್ಲಿನ ಕಿನ್ನೌರ್ ಜಿಲ್ಲೆಯಲ್ಲಿ ಮೇಘಸ್ಫೋಟ ಸಂಭವಿಸಿದೆ. ಕಮ್ರು ಎಂಬ ಗ್ರಾಮದ ಬಳಿಯ ಪರ್ವತಗಳಲ್ಲಿ ಮೇಘಸ್ಫೋಟ ಸಂಭವಿಸಿದ್ದು, ಭಾರೀ ಪ್ರವಾಹ ಉಂಟಾಗಿದೆ. ಮೇಘಸ್ಫೋಟದಿಂದ ಗ್ರಾಮದ ಮಧ್ಯದಲ್ಲಿ ಬೃಹದಾಕಾರದ ಚರಂಡಿ ನಿರ್ಮಾಣವಾಗಿದ್ದು ಚರಂಡಿ ಬಳಿ ನಿಂತಿದ್ದ ಹಲವು ವಾಹನಗಳು ಸಿಲುಕಿಕೊಂಡಿವೆ. ಪ್ರವಾಹದಲ್ಲಿ ಇದುವರೆಗೆ ಯಾವುದೇ ಪ್ರಾಣಹಾನಿಯಾಗಿಲ್ಲ. ಆದರೆ, ಅಪಾರ ಪ್ರಮಾಣದ ಸೇಬು ತೋಟ ಸೇರಿದಂತೆ ಅನೇಕ ಮನೆಗಳು ಹಾನಿಗೀಡಾಗಿವೆ. ಚರಂಡಿಯಲ್ಲಿ ಪ್ರವಾಹದ ಜತೆಗೆ ದೊಡ್ಡ-ದೊಡ್ಡ ಕಲ್ಲುಗಳು ಉರುಳಿ ಬಂದಿವೆ. ಇದರಿಂದಾಗಿ ಚರಂಡಿಯ ಸುತ್ತ ಭೂ ಸವೆತ ಉಂಟಾಗಿದೆ. ಸದ್ಯ ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಶಾಂತ ವಾತಾವರಣವಿತ್ತು. ಆದರೆ, ಇಂದು ಹಠಾತ್ತನೆ ಮೇಘಸ್ಫೋಟ ಸಂಭವಿಸಿದ್ದು, ಇಲ್ಲಿನ ಜನರು ಬೆಚ್ಚಿಬಿದ್ದಿದ್ದಾರೆ. ಹೊಂಗ್ರಾಂಗ್ ಎಂಬ ಕಣಿವೆಯ ಸುತ್ತ-ಮುತ್ತಲಿರುವ ಕಮ್ರು ಜಿಲ್ಲೆ ಹೊರತಾಗಿಯೂ ರುನ್ನಂಗ್ ನಾಲಾ, ಲಿಟುಕ್ ಡೋಗ್ರಿಯಲ್ಲಿಯೂ ಪ್ರವಾಹ ಉಂಟಾಗಿದೆ. ಪ್ರಕೃತಿ ವಿಕೋಪದಿಂದ ಹಲವು ನದಿಗಳು ಉಕ್ಕಿ ಹರಿಯುತ್ತಿವೆ. ಜುಲೈ 25 ರ ವರೆಗೆ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಹಾಗಾಗಿ ಜನರು ಮುಂಜಾಗ್ರತೆ ವಹಿಸುವಂತೆ ಜಿಲ್ಲಾಧಿಕಾರಿ ಎಸ್ ರವೀಶ್ ಅವರು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: Heavy rain: ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ.. ಚಿಕ್ಕೋಡಿಯ ಹಲವು ಸೇತುವೆಗಳು ಜಲಾವೃತ