ಕ್ರಿಸ್‌ಮಸ್‌ ಸಂಭ್ರಮ: ವಿದ್ಯುತ್ ದೀಪಗಳಿಂದ ಅಲಂಕಾರಗೊಂಡ ಚರ್ಚ್‌ಗಳು - ವಿದ್ಯುತ್ ದೀಪ

🎬 Watch Now: Feature Video

thumbnail

By ETV Bharat Karnataka Team

Published : Dec 25, 2023, 8:18 AM IST

ಹಾವೇರಿ: ವಿಶ್ವಾದ್ಯಂತ ಕ್ರಿಸ್‌ಮಸ್‌ ಸಂಭ್ರಮ ಜೋರಾಗಿದೆ. ಹಾವೇರಿಯ ಪ್ರಸಿದ್ಧ ಚರ್ಚ್‌ಗಳು ಅಲಂಕರಿಸಿಕೊಂಡು ಬೆಳಕಿನ ರಂಗಿನಲ್ಲಿ ಮಿಂದೇಳುತ್ತಿವೆ. ಭಾರತಿ ನಗರದಲ್ಲಿರುವ ಸೇಂಟ್​​ ಅನ್ನಿಸ್ ಮತ್ತು ದೇವದರ ಚರ್ಚ್‌ಗಳಲ್ಲಿ ಇಂದು ಬೆಳಗ್ಗೆಯಿಂದಲೇ ಯೇಸುವಿನ ಪ್ರಾರ್ಥನೆ ಆರಂಭವಾಗಿದೆ. ಚರ್ಚ್‌ಗಳಿಗೆ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದ್ದು, ಗಮನ ಸೆಳೆಯುತ್ತಿವೆ. ಯೇಸು ಜನಿಸಿದ ದ್ಯೋತಕವಾಗಿ ಕುರಿದೊಡ್ಡಿಗಳನ್ನು ನಿರ್ಮಿಸಲಾಗಿದೆ, ಅದರಲ್ಲಿ ಗೋದಲಿಗಳ ನಿರ್ಮಾಣ ಮಾಡಲಾಗಿದೆ. 

ಈ ಕುರಿತಂತೆ ಮಾತನಾಡಿದ ಸೆಂಟ್ ಅನ್ನಿಸ್ ಚರ್ಚ್ ಫಾದರ್ ಜೋಸೆಫ್ ಬಾಲಯ್ಯ, "ಹಾವೇರಿಯಲ್ಲಿ ಭಾನುವಾರ ರಾತ್ರಿ ಬಲಿ ಪೂಜೆ ನಂತರ ಕ್ರಿಸ್‌ಮಸ್‌ ಆಚರಣೆಗೆ ಚಾಲನೆ ನೀಡಲಾಗುತ್ತದೆ. ಸೋಮವಾರ ಮುಂಜಾನೆ ಸಾಮೂಹಿಕ ಪ್ರಾರ್ಥನೆ ಮಾಡಿ, ಮೇಣದಬತ್ತಿ ಬೆಳಗುವ ಮೂಲಕ ಯೇಸು ಜನ್ಮದಿನವನ್ನು ಆಚರಿಸಲಾಗುವುದು. ಮಾನವನ ರಕ್ಷಣೆಗಾಗಿ, ಮಾನವರ ಪಾಪಗಳನ್ನು ಕಳೆಯಲು, ಮಾನವರ ಉದ್ಧಾರ ಮಾಡಲು ಯೇಸು ಕ್ರೈಸ್ತರು 2000 ವರ್ಷಗಳ ಹಿಂದೆ ಜನಿಸಿದ್ದರು. ಪ್ರಸ್ತುತ ದಿನಗಳಲ್ಲಿ ಯೇಸುವಿನ ಬೋಧನೆಗಳು ಜನರಿಗೆ ಹೆಚ್ಚು ಹತ್ತಿರವಾಗುತ್ತವೆ" ಎಂದು ಹೇಳಿದರು.

ಇದನ್ನೂ ಓದಿ : Christmas in Goa : ಗೋವಾದಲ್ಲಿ ಯೇಸು ಕ್ರಿಸ್ತನ ಜನ್ಮದಿನಾಚರಣೆ ಹೀಗಿತ್ತು ನೋಡಿ..!

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.