ದಾವಣಗೆರೆ: ಸಂತ ತೋಮಸರ ಚರ್ಚ್‌ನಲ್ಲಿ ಕ್ರಿಸ್‌ಮಸ್ ಸಂಭ್ರಮ- ವಿಡಿಯೋ - etv bharat kannada
🎬 Watch Now: Feature Video
Published : Dec 25, 2023, 5:27 PM IST
ದಾವಣಗೆರೆ: ಕ್ರಿಸ್‌ಮಸ್ ಹಬ್ಬದ ಅಂಗವಾಗಿ ಇಂದು ಜಿಲ್ಲೆಯ ಕ್ರಿಶ್ಚಿಯನ್ ಸಮುದಾಯದವರ ಮನೆಗಳಲ್ಲಿ ಸಂಭ್ರಮ ಮನೆಮಾಡಿತ್ತು. ನಗರದ ಪಿ.ಜೆ.ಬಡಾವಣೆಯಲ್ಲಿರುವ ಸಂತ ತೋಮಸರ ಚರ್ಚ್‌ಗೆ ಬೆಳಿಗ್ಗೆಯಿಂದಲೇ ಜನರು ಆಗಮಿಸಿ ಮೊಂಬತ್ತಿ ಹಚ್ಚಿ ಯೇಸುವಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಬಳಿಕ ಶುಭಾಶಯ ವಿನಿಮಯ ಮಾಡಿಕೊಂಡರು.
ಚರ್ಚ್ ಅನ್ನು ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗಿತ್ತು. ಕ್ರಿಸ್‌ಮಸ್ ಅಂಗವಾಗಿ ‘ರಕ್ಷಣಾ ಚರಿತ್ರೆ’ ಶೀರ್ಷಿಕೆಯಡಿ ನಿರ್ಮಿಸಿರುವ ಗೋದಲಿ ಎಲ್ಲರ ಗಮನ ಸೆಳೆಯುತ್ತಿತ್ತು. ಇದರಲ್ಲಿ ಯೇಸುಕ್ರಿಸ್ತನ ಜನನ, ಹೆರೋದ ಅರಸನ ಅರಮನೆ, ಜೆರುಸಲೇಮ್ ನಗರ ಸೇರಿದಂತೆ ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದ ಅನೇಕ ಗೋದಲಿಗಳನ್ನು ನಿರ್ಮಿಸಲಾಗಿದೆ.
ಕ್ರಿಸ್‌ಮಸ್ ಹಿನ್ನೆಲೆ: ಪ್ರಾಚೀನ ಕ್ರಿಶ್ಚಿಯನ್ ದಂತಕಥೆಗಳ ಪ್ರಕಾರ, ಡಿಸೆಂಬರ್ 25ರಂದು ಏಸುವಿನ ಜನ್ಮ ದಿನ. ಕ್ರಿಸ್‌ಮಸ್ ಎಂಬುದು ಹಳೆಯ ಇಂಗ್ಲಿಷ್ ಪದವಾಗಿದೆ. ಇದನ್ನು ಕ್ರಿಸ್ತನ ಮಾಸ್ ಎಂದು ಕರೆಯಲಾಗುತ್ತದೆ. ಐತಿಹಾಸಿಕವಾಗಿ, ಮೊದಲ ದಾಖಲಿತ ಕ್ರಿಸ್‌ಮಸ್ ಆಚರಣೆ ರೋಮನ್ ಚಕ್ರವರ್ತಿ ಕಾನ್ಸ್ಟಂಟೈನ್ ಆಳ್ವಿಕೆಯಲ್ಲಿ ಮಾಡಲಾಗಿತ್ತು. ಕ್ರಿ.ಶ 336ಕ್ಕೂ ಹಿಂದಿನಿಂದ ಈ ದಿನಾಚರಣೆ ಮಾಡಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿ: ಇಂದು ಶಾಂತಿ, ಸೌಹಾರ್ದತೆ ಸಾರುವ ಕ್ರಿಸ್‌ಮಸ್ ಹಬ್ಬ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದ್ಧೂರಿ ಆಚರಣೆ