ತುಮಕೂರಿನಲ್ಲಿ ಸಾಕು ನಾಯಿಯನ್ನು ಹೊತ್ತೊಯ್ದ ಚಿರತೆ.. ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ನಿವೃತ್ತ ಆಹಾರ ನಿರೀಕ್ಷಕ ವೀರಭದ್ರಯ್ಯ
🎬 Watch Now: Feature Video
ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ಕಡಬ ಹೋಬಳಿ ಗಡಿ ಭಾಗದ ಚಿಮ್ಮನಹಳ್ಳಿ ಗ್ರಾಮದ ತೋಟದ ಮನೆಯೊಂದರಲ್ಲಿ ಮಂಗಳವಾರ ಮುಂಜಾನೆ ಚಿರತೆಯೊಂದು ಬಂದು ಸಾಕು ನಾಯಿಯನ್ನು ಹೊತ್ತೊಯ್ದಿದೆ. ಈ ದೃಶ್ಯ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗುಬ್ಬಿ ಎಪಿಎಂಸಿ ಮಾಜಿ ಸದಸ್ಯ ಹಾಗೂ ನಿವೃತ್ತ ಆಹಾರ ನಿರೀಕ್ಷಕ ವೀರಭದ್ರಯ್ಯ ಅವರ ತೋಟದ ಮನೆಯಲ್ಲಿ ಈ ಘಟನೆ ನಡೆದಿದೆ. ತುರುವೇಕೆರೆ ತಾಲೂಕು ಗಡಿ ಭಾಗದ ಈ ಗ್ರಾಮ ಸೇರಿದಂತೆ ಸುತ್ತಲಿನ ಎರಡು ತಾಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಆಹಾರ ಹುಡುಕಿ ತೋಟದ ಮನೆಗಳತ್ತ ಬರುವ ಚಿರತೆ ನಾಯಿಗಳ ಬೇಟೆ ಆಡುತ್ತಿವೆ. ಮನುಷ್ಯರ ಮೇಲೆರಗುವ ಮುನ್ನ ಚಿರತೆಯನ್ನು ಬಂಧಿಸುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.
Last Updated : Feb 3, 2023, 8:27 PM IST