ಶಿವಮೊಗ್ಗದಲ್ಲಿ ದಸರಾ ಸಂಭ್ರಮ: ಜನಮನ ಸೆಳೆದ ಚಂದನ ಶೆಟ್ಟಿ ಮ್ಯೂಸಿಕಲ್ ನೈಟ್- ವಿಡಿಯೋ - ಕನ್ನಡದ ರ್ಯಾಪರ್ ಚಂದನ ಶೆಟ್ಟಿ
🎬 Watch Now: Feature Video
Published : Oct 22, 2023, 10:01 PM IST
ಶಿವಮೊಗ್ಗ: ನಗರದ ಫ್ರೀಡಂ ಪಾರ್ಕ್‌ನಲ್ಲಿ ಮಹಾನವಮಿ ದಸರಾ ಆಚರಣೆಯ ವಿಶೇಷ ಕಾರ್ಯಕ್ರಮ ನಡೆಯಿತು. ರ್ಯಾಪರ್ ಚಂದನ್ ಶೆಟ್ಟಿ ಅವರ ಮ್ಯೂಸಿಕಲ್ ನೈಟ್ ಯುವಜನತೆಯನ್ನು ರಂಜಿಸಿತು. ಗಾಯಕರಾದ ಚಂದನ್ ಶೆಟ್ಟಿ, ಐಶ್ವರ್ಯ ಹಾಗು ಸುರಕ್ಷಾ ದಾಸ್ ಕನ್ನಡದ ಜನಪ್ರಿಯ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ಮುದಗೊಳಿಸಿದರು. ಚಂದನ್ ಶೆಟ್ಟಿ ಅಲ್ಬಮ್ ಹಾಗೂ ಸಿನಿಮಾ ಗೀತೆಗಳನ್ನು ಹಾಡಿದರು. ಐದು ವರ್ಷದ ಹಿಂದೆ ಇದೇ ವೇದಿಕೆಯಲ್ಲಿ ಕಾರ್ಯಕ್ರಮ ನೀಡಿದ್ದೆ ಎಂದು ಹಳೆಯ ನೆನಪು ಮೆಲುಕು ಹಾಕಿದರು.
ಇನ್ನು, ನಾಡಹಬ್ಬ ಮೈಸೂರಿನಲ್ಲಿ ಜೋರಾಗಿದೆ. ವಿಶ್ವವಿಖ್ಯಾತ ಅರಮನೆ ಜಗಮಗಿಸುತ್ತಿದೆ. ಸಾಂಸ್ಕೃತಿಕ ನಗರದಲ್ಲೆಲ್ಲ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಜಂಬೂ ಸವಾರಿ ದಿನ ಸಮೀಪಿಸುತ್ತಿದ್ದು, ದೇಶ ವಿದೇಶಗಳಿಂದ ಈಗಾಗಲೇ ಜನರು ಪಾರಂಪರಿಕ ನಗರಿಗೆ ಆಗಮಿಸಿದ್ದಾರೆ. ಇತ್ತೀಚೆಗೆ ಅರಮನೆಯಲ್ಲಿ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದವು. ರಾಜವಂಶಸ್ಥ ಯದುವೀರ್ ಖಾಸಗಿ ದರ್ಬಾರ್ ನಡೆಸಿದ್ದರು. ಇತ್ತೀಚೆಗಷ್ಟೇ ಶರನ್ನವರಾತ್ರಿ ಹಿನ್ನೆಲೆಯಲ್ಲಿ ಸರಸ್ವತಿ ಪೂಜೆಯನ್ನು ತಮ್ಮ ಪುತ್ರ ಆದ್ಯವೀರ್ ಜತೆಗೂಡಿ ನೆರವೇರಿಸಿದ್ದರು.
ಇದನ್ನೂಓದಿ: ಮೈಸೂರು ದಸರಾ ಸಂಭ್ರಮ: ಚಾಮುಂಡಿ ಬೆಟ್ಟದಲ್ಲಿ ದುರ್ಗಾ ನಮಸ್ಕಾರ ಕಾರ್ಯಕ್ರಮ - ವಿಡಿಯೋ