ಬೈಕ್‌ನಲ್ಲಿಟ್ಟಿದ್ದ ಎರಡೂವರೆ ಲಕ್ಷ ಹಣ ಕಳ್ಳತನ: ಸಿಸಿಟಿವಿಯಲ್ಲಿ ಕಳ್ಳನ ಕೈಚಳಕ ಸೆರೆ - ಕಳ್ಳತನ ವಿಡಿಯೋ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/13-12-2023/640-480-20253859-thumbnail-16x9-am.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Dec 13, 2023, 7:58 AM IST
ವಿಜಯಪುರ: ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ದ್ವಿಚಕ್ರವಾಹನದ ಮುಂಭಾಗದಲ್ಲಿ ಇಡಲಾಗಿದ್ದ ಎರಡೂವರೆ ಲಕ್ಷ ಹಣವನ್ನು ವ್ಯಕ್ತಿಯೋರ್ವ ಕದ್ದು ಪರಾರಿಯಾದ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದಲ್ಲಿ ಮಂಗಳವಾರ ನಡೆದಿದೆ. ವ್ಯಕ್ತಿ ಹಣವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗುವ ದೃಶ್ಯ ಹತ್ತಿರದ ಅಂಗಡಿಯ ಸಿಸಿಟಿವಿಯಲ್ಲಿ ದಾಖಲಾಗಿದೆ. ನಿಡಗುಂದಿ ತಾಲೂಕಿನ ಹೆಬ್ಬಾಳ ಗ್ರಾಮದ ಹೊಳೆಬಸು ಸಿದ್ರಾಮಪ್ಪ ಹೋಗೋಡಿ ಎಂಬಾತ ಹಣ ಕಳೆದುಕೊಂಡಿರುವ ವ್ಯಕ್ತಿ.
ಯೂನಿಯನ್ ಬ್ಯಾಂಕ್ನಿಂದ 2.5 ಲಕ್ಷ ರೂ. ಹಣ ತೆಗೆಸಿ, ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿಕೊಂಡು ಬಂದು ಬೈಕ್‌ನಲ್ಲಿಟ್ಟಿದ್ದರು ಎಂದು ತಿಳಿದುಬಂದಿದೆ. ಬಳಿಕ ಸಿದ್ರಾಮಪ್ಪ ಮೊಬೈಲ್ ದುರಸ್ತಿಗಾಗಿ ಅಂಗಡಿಗೆ ತೆರಳಿದ್ದಾರೆ. ಸಿದ್ರಾಮಪ್ಪ ತೆರಳಿದ ತಕ್ಷಣವೇ ಬಂದ ಕಳ್ಳನೋರ್ವ ಬೈಕ್ನ ಮುಂಭಾಗದ ಬ್ಯಾಗ್ಗೆ ಕೈ ಹಾಕಿ ಒಮ್ಮೆ ಹಿಂದೆ ಮುಂದೆ ನೋಡಿ ಹಣದ ಸಮೇತ ಚೀಲವನ್ನು ತೆಗೆದುಕೊಂಡು ಹೋಗಿದ್ದಾನೆ. ಕಳ್ಳನ ಕೈ ಚಳಕದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಇಜೇರಿ ಕಾಂಪ್ಲೆಕ್ಸ್ ಬಳಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಮನೆ ಬಳಿ ಹುಲ್ಲು ಮೇಯುತ್ತಿದ್ದ 15 ಹಸುಗಳ ಮೇಲೆ ಆ್ಯಸಿಡ್ ಎರಚಿದ ವೃದ್ಧ ಮಹಿಳೆ - ವಿಡಿಯೋ