ಒಡಿಶಾ ರೈಲು ದುರಂತ: ಸ್ಥಳಕ್ಕೆ ತಲುಪಿದ ಸಿಬಿಐ ತಂಡ
🎬 Watch Now: Feature Video
ಒಡಿಶಾ: ಶುಕ್ರವಾರ ಸಂಜೆ ಸಂಭವಿಸಿದ ಒಡಿಶಾ ರೈಲು ದುರಂತ ದೇಶವನ್ನೇ ಬೆಚ್ಚಿಬೀಳಿಸಿದೆ. ಈಗಾಗಲೇ ಒಡಿಶಾ ರೈಲು ದುರಂತದ ಬಗ್ಗೆ ಸಿಬಿಐ (ಕೇಂದ್ರೀಯ ತನಿಖಾ ಸಂಸ್ಥೆ) ತನಿಖೆ ಕೈಗೆತ್ತಿಕೊಂಡಿದೆ. ವಿಧಿವಿಜ್ಞಾನ ಮತ್ತು ಸಿಬಿಐ ತಂಡಗಳು ಸ್ಥಳಕ್ಕೆ ತಲುಪಿವೆ.
ಈ ತಂಡಗಳು ಸಾಕ್ಷ್ಯಗಳನ್ನು ಸಂಗ್ರಹಿಸಿ ತನಿಖೆ ನಡೆಸುತ್ತಿದ್ದಾರೆ. ರೈಲ್ವೆ ಇಲಾಖೆ ಅವರಿಗೆ ಬೇಕಾದ ನೆರವು ನೀಡುತ್ತಿದೆ. ಈ ಪ್ರಕರಣ ಸಂಬಂಧ ಎಲ್ಲಾ ಆಯಾಮಗಳಲ್ಲೂ ಸಿಬಿಐ ತನಿಖೆ ನಡೆಸುತ್ತದೆ ಎಂದು ಸೌತ್ ಈಸ್ಟರ್ನ್ ರೈಲ್ವೆಯ ಸಿಪಿಆರ್ಒ ಆದಿತ್ಯ ಕುಮಾರ್ ಚೌಧರಿ ಮಾಹಿತಿ ನೀಡಿದ್ದಾರೆ.
ಒಡಿಶಾದ ಬಾಲಸೋರ್‌ನಲ್ಲಿ ನಡೆದ ತ್ರಿವಳಿ ರೈಲುಗಳ ಅಪಘಾತದ ಸ್ಥಳದಲ್ಲಿ 10 ಅಧಿಕಾರಿಗಳ ಸಿಬಿಐ ತಂಡ ಪರಿಶೀಲನೆ ನಡೆಸುತ್ತಿದೆ. ಅಪಘಾತದ ತನಿಖೆಗಾಗಿ ಸಿಬಿಐ ಅಧಿಕಾರಿಗಳು ಆಗಮಿಸಿದ ದೃಶ್ಯಗಳೀಗ ವೈರಲ್ ಆಗುತ್ತಿವೆ.
ಇದನ್ನೂ ಓದಿ: ಒಡಿಶಾ ರೈಲು ಅಪಘಾತ:ಇನ್ನೂ ಸಿಗದ 101 ಮೃತದೇಹಗಳ ಗುರುತು..55 ಶವ ಸಂಬಂಧಿಕರಿಗೆ ಹಸ್ತಾಂತರ
ಶುಕ್ರವಾರ ಸಂಜೆ ಸಂಭವಿಸಿರುವ ಈ ದುರ್ಘಟನೆಯಲ್ಲಿ 275 ಮಂದಿ ಸಾವನ್ನಪ್ಪಿದ್ದರೆ, 1,000ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. 101 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.