ಅಡುಗೆ ಮನೆ ಹೊಕ್ಕಿದ್ದ ನಾಗರಹಾವು : ವಿಷಕಾರಿ ಸರ್ಪದಿಂದ ಮನೆಯವರನ್ನು ಕಾಪಾಡಿದ ಬೆಕ್ಕುಗಳು - cobra snake was hiding in the kitchen

🎬 Watch Now: Feature Video

thumbnail

By

Published : Jul 6, 2023, 5:21 PM IST

ಗದಗ : ಎರಡು ಬೆಕ್ಕುಗಳು ವಿಷಕಾರಿ ನಾಗರ ಹಾವಿನಿಂದ ಮನೆಯ ಸದಸ್ಯರ ಪ್ರಾಣ ಉಳಿಸಿರುವ ಘಟನೆ ಜಿಲ್ಲೆಯ ನರಗುಂದ ಪಟ್ಟಣದ ಡಾ. ಅಂಬೇಡ್ಕರ್ ನಗರದಲ್ಲಿ ಜರುಗಿದೆ. ಲಕ್ಷ್ಮಣ್ ಎಂಬುವರ ಮನೆಯಲ್ಲಿ ಬುಧವಾರ ಈ ಘಟನೆ ನಡೆದಿದೆ.

ಲಕ್ಷ್ಮಣ್​ ಅವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವಿಷಕಾರಿ ನಾಗರಹಾವು ಅಡುಗೆ ಮನೆಯನ್ನು ಸೇರಿತ್ತು. ಹಾವು ಸೇರಿದ್ದನ್ನು ಮನೆಯಲ್ಲಿದ್ದ ಬೆಕ್ಕುಗಳು ಕಂಡಿವೆ. ಈ ವೇಳೆ ಮನೆ ಮಾಲೀಕರು ಆಗಮಿಸುತ್ತಿದ್ದಂತೆಯೇ ಅಡುಗೆ ಮನೆ ಬಳಿ ಎರಡು ಬೆಕ್ಕುಗಳು ವಿಚಿತ್ರವಾಗಿ ವರ್ತಿಸುವುದನ್ನು ಕಂಡಿದ್ದಾರೆ. ಬೆಕ್ಕುಗಳ ವರ್ತನೆಯಿಂದ ಅನುಮಾನಗೊಂಡ ಮನೆ ಮಾಲೀಕರು ಅತ್ತ ಕಣ್ಣಾಡಿಸಿದಾಗ ಹಾವು ಇರುವುದು ಗೊತ್ತಾಗಿದೆ. ತಕ್ಷಣವೇ ಉರಗ ತಜ್ಞ ಸುರೇಬಾನ ಅವರನ್ನು ಕರೆಸಿ ನಾಗರಹಾವನ್ನು ಸೆರೆ ಹಿಡಿದು ರಕ್ಷಣೆ ಮಾಡಿದ್ದಾರೆ. 

ನಾಗರಹಾವು ಸೆರೆ ಹಿಡಿದ ಬಳಿಕ ಕುಟುಂಬದ ಸದಸ್ಯರು ನಿಟ್ಟುಸಿರು ಬಿಟ್ಟಿದ್ದಾರೆ. ಸೆರೆ ಸಿಕ್ಕ ನಾಗರಹಾವಿಗೆ ವಿಭೂತಿ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದ ಬಳಿಕ ಕಾಡಿಗೆ ಬಿಡಲಾಗಿದೆ.

ಇದನ್ನೂ ಓದಿ : Snake in Shoe: ಶೂ ಒಳಗೆ ಅವಿತು ಕುಳಿತಿದ್ದ ಮರಿ ನಾಗರ ಹಾವು ರಕ್ಷಣೆ.. ವಿಡಿಯೋ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.