ಭದ್ರಾ ಹಿನ್ನೀರಲ್ಲಿ 56 ಕೆಜಿ ತೂಕದ ಕ್ಯಾಟ್ಲಾ ಮೀನು ಬಲೆಗೆ; 12 ಸಾವಿರ ರೂಪಾಯಿಗೆ ಸೇಲ್- ವಿಡಿಯೋ - ಕ್ಯಾಟ್ಲಾ ಮೀನು
🎬 Watch Now: Feature Video
ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಭದ್ರಾ ಹಿನ್ನೀರಿನಲ್ಲಿ ಶನಿವಾರ 56 ಕೆ.ಜಿ ತೂಕದ ಬೃಹತ್ ಗಾತ್ರದ ಕ್ಯಾಟ್ಲಾ ಮೀನು ಬಲೆಗೆ ಬಿದ್ದಿದೆ. ಆಕರ್ಷಕ ಮೀನನ್ನು ಎನ್.ಆರ್.ಪುರದ ಫೈರೋಜ್ ಎಂಬವರ ಅಂಗಡಿಗೆ ತರಲಾಗಿತ್ತು. ಈ ಸುದ್ದಿ ತಿಳಿದ ನಾಲ್ವರು ಗ್ರಾಹಕರು ಸೇರಿ 12 ಸಾವಿರ ರೂಪಾಯಿಗೆ ಖರೀದಿಸಿದ್ದಾರೆ.
ಭಾರತೀಯ ಕಾರ್ಪ್ ಎಂದು ಕರೆಯಲ್ಪಡುವ ಕ್ಯಾಟ್ಲಾ ಮೀನು ದೇಶದ ನದಿಗಳು ಮತ್ತು ಸರೋವರಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ವರ್ಷವಿಡೀ ಲಭ್ಯವಿದ್ದು, ಮಾರುಕಟ್ಟೆಯಲ್ಲಿ ಕಂಡುಬರುವ ಜನಪ್ರಿಯ ಮೀನು ಪ್ರಭೇದಗಳಲ್ಲಿ ಪೈಕಿ ಇದೂ ಒಂದಾಗಿದೆ. ಈ ಮೀನು ಒಮೆಗಾ 6 ರಿಂದ ಒಮೆಗಾ 3 ಕೊಬ್ಬಿನ ಆಮ್ಲಗಳನ್ನು ಹೊಂದಿದೆ.
ಕ್ಯಾಟ್ಲಾ ಮೀನಿನಲ್ಲಿ ನಿಯಾಸಿನ್ ಅಥವಾ ವಿಟಮಿನ್ ಬಿ3 ಕೂಡ ಹೇರಳವಾಗಿದೆ. ಕ್ಯಾಟ್ಲಾ ಫಿಶ್ ಮೂಲಕ ಬಗೆಬಗೆ ರೆಸಿಪಿಗಳನ್ನು ನಿಮ್ಮ ಮನೆಯ ಸೌಕರ್ಯದಲ್ಲೇ ತಯಾರಿಸಬಹುದು. ಹೆಚ್ಚು ರುಚಿಕಟ್ಟಾಗಿರುವ ಕಾರಣಕ್ಕೆ ದೇಶವ್ಯಾಪಿ ಮೀನು ಖಾದ್ಯಪ್ರಿಯರಿಗೆ ಅಚ್ಚುಮೆಚ್ಚಾಗಿದೆ. ಈ ಮೀನು ಕಂಡು ಎನ್.ಆರ್.ಪುರ ಜನರಂತೂ ಅರೆಕ್ಷಣ ಹುಬ್ಬೇರಿಸಿದ್ದರು.
ಇದನ್ನೂ ಓದಿ: ಕಾರವಾರದಲ್ಲಿ ಬಲೆಗೆ ಬಿದ್ದ ಬೃಹತ್ ಕುಡಗೇರಿ ಮೀನು; ಕೆಜಿಗೆ 500 ರುಪಾಯಿಯಂತೆ ಮಾರಾಟ