ಪೌರ ಕಾರ್ಮಿಕರ ಪಾದ ಪೂಜೆ ಮಾಡಿ ದೀಪಾವಳಿ ಹಬ್ಬದ ಆಚರಣೆ ಮಾಡಿದ ಸಿ ಟಿ ರವಿ - ಈಟಿವಿ ಭಾರತ ಕನ್ನಡ
🎬 Watch Now: Feature Video
ಚಿಕ್ಕಮಗಳೂರು : ದೀಪಾವಳಿ ಹಬ್ಬದ ಪ್ರಯುಕ್ತ ಪೆನ್ಷನ್ ಮೊಹಲ್ಲದಲ್ಲಿರುವ ಪೌರ ಕಾರ್ಮಿಕರ ಕಾಲೋನಿಯಲ್ಲಿ ದೀಪಾವಳಿ ಹಬ್ಬವನ್ನು ಶಾಸಕ ಸಿ ಟಿ ರವಿ ಆಚರಣೆ ಮಾಡಿದ್ದಾರೆ. ಇದೇ ವೇಳೆ ಪೌರ ಕಾರ್ಮಿಕರ ಕಾಲಿಗೆ ಹೂವನಿಟ್ಟು ಪಾದಪೂಜೆ ಮಾಡಿ ಅವರ ಕಾಲಿಗೆ ನಮಸ್ಕರಿಸಿದರು. ಈ ವೇಳೆ, ರಾಜ್ಯದ ಮುಂದಿನ ಮುಖ್ಯಮಂತ್ರಿ ಸಿ ಟಿ ರವಿ ಎಂದು ಕಾರ್ಯಕರ್ತರು ಕೂಗಿದ್ದಾರೆ. ಪಾದ ಪೂಜೆ ಮಾಡಿ ನಂತರ ಮಾತನಾಡಿದ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ, ಪ್ರಧಾನಿ ನರೇಂದ್ರ ಮೋದಿಯವರು ದೇಶ ಕಾಯುವ ಸೈನಿಕರ ಜೊತೆ ದೀಪಾವಳಿ ಆಚರಣೆ ಮಾಡುತ್ತಿದ್ದಾರೆ. ಆದರೆ ನಾವು ನಮ್ಮ ಆರೋಗ್ಯದ ಪರ ಹೋರಾಟ ಮಾಡುವ ಪೌರ ಕಾರ್ಮಿಕರ ಜೊತೆ ದೀಪಾವಳಿ ಹಬ್ಬ ಆಚರಣೆ ಮಾಡುತ್ತಿದ್ದೇನೆ. ಪೌರ ಕಾರ್ಮಿಕರ ಪಾದ ಪೂಜೆ ಮಾಡಿದ್ದು, ನನಗೆ ಒಂದು ಅವಿಸ್ಮರಣೀಯ ಸಂದರ್ಭ. ಕಾಯಕವೇ ಕೈಲಾಸ ಎಂಬುದು ಪುನರುತ್ಥಾನಗೊಳ್ಳಬೇಕು ಎಂದರು.
Last Updated : Feb 3, 2023, 8:30 PM IST