ಬಜೆಟ್ ಮಂಡನೆಗೂ ಮುನ್ನ ಸಿಎಂ ಟೆಂಪಲ್ ರನ್: ಮಹಾ ಜನತೆಯ ಹೆಸರಿನಲ್ಲಿ ಅರ್ಚನೆ ಮಾಡಿಸಿದ ಬೊಮ್ಮಾಯಿ - ETV Bharath Karnataka
🎬 Watch Now: Feature Video
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಎರಡನೇ ಆರ್ಥಿಕ ಮುಂಗಡ ಪತ್ರ ಮಂಡನೆಗೆ ಸಿದ್ದರಾಗಿದ್ದು, ಬಜೆಟ್ ಮಂಡನೆಗೂ ಮುನ್ನ ಟೆಂಪಲ್ ರನ್ ಮಾಡಿದರು. ಸಮಸ್ತ ಕರ್ನಾಟಕದ ಮಹಾಜನತೆಯ ಹೆಸರಿನಲ್ಲಿ ಅರ್ಚನೆ ಮಾಡಿಸಿದರು.
2023-24 ನೇ ಸಾಲಿನ ಬಜೆಟ್ ಮಂಡನೆಗೂ ಮುನ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರ್ಟಿ ನಗರದ ಮುತ್ತಪ್ಪ ಬ್ಲಾಕ್ನ ಕಂಠೇಶ್ವರ ದೇವಸ್ಥಾನ ಹಾಗೂ ಬಾಲಬ್ರುಯಿ ಬಳಿ ಇರುವ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಸಮಸ್ತ ಕರ್ನಾಟಕದ ಮಹಾಜನತೆಯ ಹೆಸರಿನಲ್ಲಿ ಅರ್ಚನೆ ಮಾಡಿಸಿದ ಸಿಎಂ, ಮಂಗಳಾರತಿ ತಟ್ಟೆಗೆ 500 ರೂಪಾಯಿ ಎರಡು ನೋಟುಗಳನ್ನು ಹಾಕಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸಮಸ್ತ ಕರ್ನಾಟಕದ ಮಹಾಜನತೆಯ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾಗಿ ತಿಳಿಸಿದರು.
ಇದನ್ನೂ ಓದಿ: Karnataka Budget 2023: ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ: ಸಚಿವ ಸಂಪುಟ ಸಭೆ ಪ್ರಾರಂಭ