ಬ್ರೇಕ್ ಫೆಲ್ಯೂರ್.. ಅಥಣಿಯಲ್ಲಿ ಹಳ್ಳಕ್ಕೆ ಬಿದ್ದ ಬಸ್; ತಪ್ಪಿದ ಭಾರಿ ಅನಾಹುತ - ಅಥಣಿ ಸಾವಳಗಿ ಮಾರ್ಗ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16013052-thumbnail-3x2-sanju.jpg)
ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಕೋಕಟನೂರ ಗ್ರಾಮದಲ್ಲಿ ಬ್ರೇಕ್ ಫೇಲಾಗಿ ಬಸ್ ಹಳ್ಳಕ್ಕೆ ಬಿದ್ದಿದೆ. ಅದೃಷ್ಟವಶಾತ್ ಭಾರಿ ಅನಾಹುತವೊಂದು ತಪ್ಪಿದೆ. ಅಥಣಿ ಘಟಕಕ್ಕೆ ಸೇರಿದ ಬಸ್ ಮಧ್ಯಾಹ್ನ ಅಥಣಿ-ಸಾವಳಗಿ ಮಾರ್ಗವಾಗಿ ಸಂಚರಿಸುತ್ತಿತ್ತು. ಇದರಲ್ಲಿ ಸುಮಾರು 35ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ವೇಳೆ ಬ್ರೇಕ್ ಫೇಲಾದ ಕಾರಣದಿಂದಾಗಿ ವೇಗ ನಿಯಂತ್ರಣಕ್ಕೆ ಸಿಗದೆ ಬಸ್ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಪ್ರಾಣಾಪಾಯ ಸಂಭವಿಸಿಲ್ಲ. ಸಣ್ಣಪುಟ್ಟ ಗಾಯಗಳಾಗಿದ್ದರಿಂದ ಸ್ಥಳೀಯ ಕೊಕಟನೂರ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
Last Updated : Feb 3, 2023, 8:25 PM IST