ಕಟೀಲು ದೇವಸ್ಥಾನದ ಮುಂಭಾಗದಲ್ಲಿ ಹೊತ್ತಿ ಉರಿದ ಬಸ್.. ಮೂವರು ಪಾರು
🎬 Watch Now: Feature Video
ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಬಸ್ ಹೊತ್ತಿ ಉರಿದ ಘಟನೆ ನಡೆದಿದೆ. ಖಾಸಗಿ ಕಂಪನಿಗೆ ಸೇರಿದ ಬಸ್ ಕಟೀಲು ದೇವಾಲಯದ ಮುಂಭಾಗದಲ್ಲಿ ಏಕಾಏಕಿ ಹೊತ್ತಿ ಉರಿದಿದೆ. ಬಸ್ಸಿನಲ್ಲಿದ್ದ ಮೂವರು ಪವಾಡ ಸದೃಶ್ಯ ಪಾರಾಗಿದ್ದಾರೆ.
ಸುರತ್ಕಲ್ ಸಮೀಪದ ಖಾಸಗಿ ಸಂಸ್ಥೆಯ ಸಿಬ್ಬಂದಿಗಳನ್ನು ಕರೆದೊಯ್ಯುವ ಬಸ್ಸು ಮಧ್ಯಾಹ್ನ 2.45ರ ಸುಮಾರಿಗೆ ಕಟೀಲು ದೇವಸ್ಥಾನದ ಎದುರು ರಾಜ್ಯ ಹೆದ್ದಾರಿಯಲ್ಲಿ ನಿಲ್ಲಿಸಿದ್ದು, ಶಾರ್ಟ್ ಸರ್ಕ್ಯೂಟ್ನಿಂದ ಏಕಾಏಕಿ ಹೊತ್ತಿ ಉರಿದಿದೆ. ಘಟನೆಯಿಂದ ಸ್ಥಳೀಯರು ಭಯಭೀತರಾಗಿದ್ದಾರೆ. ಕೂಡಲೇ ನೀರು ಸರಬರಾಜು ಮಾಡುವ ಕಾವೇರಿ ವಿಶ್ವನಾಥ ಎಂಬುವರ ನೀರಿನ ಟ್ಯಾಂಕರ್ ಮೂಲಕ ನೀರು ಹಾಯಿಸಿ ಬೆಂಕಿಯನ್ನು ನಂದಿಸಲಾಯಿತು.
ಕಟೀಲು ರಸ್ತೆಯಲ್ಲಿ ಚಲಿಸುವ ಖಾಸಗಿ ಕಂಪನಿಯ ಈ ಬಸ್ ನೌಕರರನ್ನು ಬಿಟ್ಟು ವಾಪಸಾಗುವಾಗ ವೇಳೆ ಘಟನೆ ಸಂಭವಿಸಿದೆ. ಬಸ್ನಲ್ಲಿ ಡ್ರೈವರ್ ಸೇರಿ ಮೂರು ಜನ ಇದ್ದರು. ಬೆಂಕಿ ತಗಲಿದ ಕೂಡಲೇ ಚಾಲಕ ಹಾಗೂ ಇನ್ನಿಬ್ಬರು ಬಸ್ನಿಂದ ಜಿಗಿದು ಪಾರಾಗಿದ್ದಾರೆ.
ಇದನ್ನೂ ಓದಿ : ಸಿದ್ದರಾಮಯ್ಯಗೆ ಸಿಎಂ ಸ್ಥಾನ ಬಹುತೇಕ ಖಚಿತ.. ಅಭಿಮಾನಿಗಳು, ಬೆಂಬಲಿಗರಿಂದ ಸಂಭ್ರಮಾಚರಣೆ