ಮೈಸೂರಿನಲ್ಲಿ ವೃದ್ಧೆಯ ಮೇಲೆ ಗೂಳಿ ದಾಳಿ.. ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಸರಸ್ವತಿಪುರಂ ಮಹಿಳಾ ಕಾಲೇಜಿನ ಹತ್ತಿರ ಇರುವ ಪಾರ್ಕ್
🎬 Watch Now: Feature Video
ಮೈಸೂರು : ವೃದ್ಧೆ ಮೇಲೆ ಗೂಳಿಯೊಂದು ದಾಳಿ ನಡೆಸಿರುವ ಘಟನೆ ನಗರದ ಸರಸ್ವತಿಪುರಂನ ಪಾರ್ಕ್ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ. ಮಂಜುಳಾ (64) ಗಾಯಗೊಂಡ ವೃದ್ಧೆ. ಸದ್ಯ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಗೂಳಿ ದಾಳಿ ನಡೆಸಿರುವ ದೃಶ್ಯ ಪಾರ್ಕ್ ಮುಂಭಾಗದಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಂಜುಳಾ ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾದ ಗೂಳಿಯೊಂದು ಏಕಾಏಕಿ ದಾಳಿ ನಡೆಸಿದೆ. ಗೂಳಿ ಗುದ್ದಿದ ರಭಸಕ್ಕೆ ನೆಲಕ್ಕೆ ಬಿದ್ದ ವೃದ್ಧೆಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ನಗರದಲ್ಲಿ ಬೀದಿ ದನಗಳ ಹಾವಳಿ: ಮೈಸೂರು ನಗರದಲ್ಲಿ ಬೀದಿನಾಯಿಗಳ ಕಾಟ ಒಂದೆಡೆಯಾದರೆ, ಬೀದಿ ದನಗಳ ಹಾವಳಿಯೂ ಹೆಚ್ಚಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ನಾಯಿ ಮತ್ತು ದನಗಳ ಅಡ್ಡಾದಿಡ್ಡಿ ಓಡಾಡುವುದು ಮತ್ತು ರಸ್ತೆ ಮಧ್ಯದಲ್ಲೇ ಮಲಗುವುದು ಸಾಮಾನ್ಯವಾಗಿದೆ. ಇದರಿಂದಾಗಿ ದ್ವಿಚಕ್ರ ಹಾಗೂ ಇತರ ವಾಹನಗಳ ಸಂಚಾರ ಕಷ್ಟಕರವಾಗಿದೆ. ಈ ಸಂಬಂಧ ಕೂಡಲೇ ಪಾಲಿಕೆ ಅಧಿಕಾರಿಗಳು ಬೀದಿ ನಾಯಿ ಮತ್ತು ಬೀದಿ ದನಗಳ ಹಾವಳಿಯನ್ನು ತಪ್ಪಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ವಿಡಿಯೋ: ಹಳೇ ಮೋಟಾರ್ ಸೈಕಲ್ನ ಬಿಡಿಭಾಗ ಬಳಸಿ ವಿಭಿನ್ನ ಸೈಕಲ್ ಉತ್ಪಾದಿಸಿದ ಯುವಕ