ಮಾವೋವಾದಿಗಳ ಸಂಗ್ರಹಿಸಿಟ್ಟಿದ್ದ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನ ಪತ್ತೆ ಹಚ್ಚಿದ ಬಿಎಸ್‌ಎಫ್ ಪಡೆ
🎬 Watch Now: Feature Video
Published : Aug 30, 2023, 9:22 AM IST
ಮಲ್ಕಾನ್‌ಗಿರಿ (ಒಡಿಶಾ): ಮಲ್ಕಾನ್‌ಗಿರಿ ಜಿಲ್ಲೆಯಲ್ಲಿ ಎರಡು ಕಡೆಗಳಲ್ಲಿ ಮಾವೋವಾದಿಗಳು ಅಡಗಿಸಿ ಇಟ್ಟಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಬಿಎಸ್‌ಎಫ್ ಪಡೆ ಪತ್ತೆ ಮಾಡಿ, ವಶಪಡಿಸಿಕೊಂಡಿದೆ ಎಂದು ಮಂಗಳವಾರ ಅಧಿಕೃತ ಪ್ರಕಟಣೆ ತಿಳಿಸಿದೆ.
ಕಾರ್ಯಾಚರಣೆ ವೇಳೆ ಮಾವೋವಾದಿಗಳ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪತ್ತೆ ಹಚ್ಚಲಾಗಿದೆ. ಬಿಎಸ್‌ಎಫ್‌ನ 142 ಬೆಟಾಲಿಯನ್ ಆಂಧ್ರಪ್ರದೇಶ ಮತ್ತು ಒಡಿಶಾ ಗಡಿಯಲ್ಲಿರುವ ಗೊಂಫಕೊಂಡ ಮೀಸಲು ಅರಣ್ಯದ ಸಾಮಾನ್ಯ ಪ್ರದೇಶದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
"ಬಿಎಸ್ಎಫ್ ಸಿಬ್ಬಂದಿ ಮೀಸಲು ಅರಣ್ಯದಲ್ಲಿ, ಮಾರಿಗೆಟ್ಟಾ - ಟೆಕ್ಗುಡಾ ಅಕ್ಷದಲ್ಲಿ, ಕಲಿಮೆಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಗ್ಗೆ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆಯಲ್ಲಿ, ಮಾವೋವಾದಿಗಳು ಮಣ್ಣಿನಡಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಅಡಗಿಸಿ ಇಟ್ಟಿರುವುದು ತಿಳಿದಿದೆ. ತಕ್ಷಣವೇ ಅವುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಸಂದರ್ಭದಲ್ಲಿ 32 ಲೀಟರ್ ಟಿನ್ ಐಡಿ, 2 ಕಂಟ್ರಿ ಗನ್, 101 ಜೆಲಾಟಿನ್ ಸ್ಟಿಕ್ ಹಾಗೂ 2 ಎಲೆಕ್ಟ್ರಿಕ್ ಡಿಟೋನೇಟರ್ಗಳನ್ನು ಯೋಧರು ವಶಕ್ಕೆ ತೆಗೆದುಕೊಂಡಿದ್ದಾರೆ. ಚಿತ್ತಾರಕೊಂಡ ಬ್ಲಾಕ್ನಲ್ಲಿ ಕಾರ್ಯಾಚರಣೆ ಯಶಸ್ಸು ಕಂಡಿದ್ದು, ಹಳೆಯ ಮಾವೋವಾದಿಗಳ ಶಸ್ತ್ರಾಸ್ತ್ರಗಳನ್ನು ಪತ್ತೆ ಮಾಡಲಾಗಿದೆ" ಎಂದು ಈ ಬಗ್ಗೆ ಬಿಎಸ್‌ಎಫ್ ಕಚೇರಿ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: ಹಾರಾಟದ ವೇಳೆ ಇಂಜಿನ್ನಲ್ಲಿ ದೋಷ... ಸೇಪ್ ಆಗಿ ಲ್ಯಾಂಡ್ ಆದ 2 ವಿಮಾನಗಳು.. ನಿಟ್ಟುಸಿರು ಬಿಟ್ಟ ಪ್ರಯಾಣಿಕರು