ಗಡಿಗಾಗಿ ಕಾದಾಟದ ಶಂಕೆ: ಕರಿಚಿರತೆ ಮೈಮೇಲೆ ಗಾಯದ ಗುರುತು- ವಿಡಿಯೋ
🎬 Watch Now: Feature Video
ಮೈಸೂರು: ಹಲವು ತಿಂಗಳ ಬಳಿಕ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ದಮ್ಮನಕಟ್ಟೆ ಸಫಾರಿ ಕೇಂದ್ರದ ವ್ಯಾಪ್ತಿಯಲ್ಲಿ ಕರಿ ಚಿರತೆ ಪತ್ತೆಯಾಗಿದ್ದು, ಮೈಮೇಲೆ ಗಾಯದ ಗುರುತುಗಳು ಕಾಣಿಸಿಕೊಂಡಿವೆ. ತನ್ನ ಗಡಿಗಾಗಿ ಕಾದಾಡುವಾಗ ಗಾಯಗೊಂಡಿರುವ ಶಂಕೆಯನ್ನು ವನ್ಯಜೀವಿಪ್ರಿಯರು ವ್ಯಕ್ತಪಡಿಸಿದ್ದಾರೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಚಿರತೆಗಳ ಸಂತತಿ ಹೆಚ್ಚಾಗುತ್ತಿದೆ. ಕರಿಚಿರತೆ ಕಳೆದ ಕೆಲವು ತಿಂಗಳುಗಳಿಂದ ನಾಪತ್ತೆಯಾಗಿತ್ತು. ಅದು ವಾಸವಿದ್ದ ಅರಣ್ಯ ವ್ಯಾಪ್ತಿಗೆ ಮತ್ತೊಂದು ಚಿರತೆ ಬಂದಿರುವ ಅನುಮಾನವಿದೆ. ಕರಿ ಚಿರತೆ ತನ್ನ ಸುಪರ್ದಿಗೆ ಬಂದ ಸಂದರ್ಭದಲ್ಲಿ ಎರಡೂ ಚಿರತೆಗಳ ನಡುವೆ ಘರ್ಷಣೆ ನಡೆದಿರುವ ಬಗ್ಗೆ ಶಂಕೆ ಇದೆ.
ಕರಿ ಚಿರತೆಯ ಕುತ್ತಿಗೆ ಹಾಗೂ ಬಾಲದ ಭಾಗಗಳಲ್ಲಿ ಕಾದಾಟದ ಸಂದರ್ಭದಲ್ಲಿ ಗಾಯವಾದ ಗುರುತುಗಳು ಇವೆ ಎಂದು ವನ್ಯಜೀವಿ ಛಾಯಾಗ್ರಾಹಕ ಶ್ರೇಯಸ್ ದೇವನೂರು ಈಟಿವಿ ಭಾರತ್‌ಗೆ ಮಾಹಿತಿ ನೀಡಿದ್ದಾರೆ.
ಇನ್ನು ಇತ್ತೀಚೆಗೆ ಕಾಡು ಪ್ರಾಣಿಗಳು ಮತ್ತು ಮನುಷ್ಯನ ನಡುವಿನ ಸಂಘರ್ಷ ಹೆಚ್ಚುತ್ತಿದೆ. ಇದರಿಂದಾಗಿ ವನ್ಯಜೀವಿಗಳು ಮತ್ತು ಮನುಷ್ಯರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಪಾರ ಬೆಳೆ ಹಾನಿಯೂ ಸಂಭವಿಸುತ್ತಿದೆ.
ಇದನ್ನೂಓದಿ:110 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ರೈಲಿಂದ ಕೆಳಗೆ ಬಿದ್ದ ಯುವಕ : ಮುಂದೇನಾಯ್ತು ನೋಡಿ