ಮಾಣಿ ಡ್ಯಾಂ ಬಳಿ ನಾಯಿಯನ್ನು ಹೊತ್ತೊಯ್ದ ಕರಿ ಚಿರತೆ - Black leopard
🎬 Watch Now: Feature Video
ಶಿವಮೊಗ್ಗ : ಕರಿ ಚಿರತೆಯೊಂದು ನಾಯಿಯನ್ನು ಹೊತ್ತೊಯ್ದ ಘಟನೆ ಮಾಣಿ ಡ್ಯಾಂ ಬಳಿ ನಡೆದಿದೆ. ಮಾಣಿ ಡ್ಯಾಂನ ಲೆಫ್ಟ್ ಬ್ಯಾಕ್ ಚೆಕ್ ಪೊಸ್ಟ್ ಬಳಿ ಮಲಗಿದ್ದ ನಾಯಿಯನ್ನು ಕರಿ ಚಿರತೆ ಕಚ್ಚಿಕೊಂಡು ಹೋಗಿದೆ. ಈ ಘಟನೆಯು ಮೇ 3 ರ ಬೆಳಗಿನ ಜಾವ 2:23 ಕ್ಕೆ ನಡೆದಿದ್ದು, ಕರಿಚಿರತೆ ನಾಯಿಯನ್ನು ಕಚ್ಚಿಕೊಂಡು ಹೋಗುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಹೊಸನಗರ ತಾಲೂಕು ಮಾಣಿ ಬಳಿ ವರಾಹಿ ನದಿಗೆ ಅಣೆಕಟ್ಟು ನಿರ್ಮಾಣ ಮಾಡಲಾಗಿದ್ದು, ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತದೆ. ಮಾಣಿ ಡ್ಯಾಂ ಸಂಪೂರ್ಣ ನಿಷೇಧಿತ ಪ್ರದೇಶವಾಗಿದೆ. ಇಲ್ಲಿ ಯಾರಿಗೂ ಪ್ರವೇಶ ಇರುವುದಿಲ್ಲ. ಇಲ್ಲಿ ಭದ್ರತೆ ಭಿಗಿಯಾಗಿರುತ್ತದೆ. ಮಾಣಿ ಅಣೆಕಟ್ಟೆಯ ಹಿನ್ನಿರು ಸಂಪೂರ್ಣ ದಟ್ಟ ಕಾಡಿನಿಂದ ಕೂಡಿದ್ದು, ಇಲ್ಲಿ ಅರಣ್ಯ ಸಂರಕ್ಷಣೆ ಹೆಚ್ಚಾದ ನಂತರ ವನ್ಯ ಜೀವಿಗಳ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಅಪರೂಪದ ಕರಿ ಚಿರತೆ ಈ ಭಾಗದಲ್ಲಿ ಕಂಡು ಬಂದಿರುವುದು ಇಲ್ಲಿನ ಸೆಕ್ಯುರಿಟಿಗಳಲ್ಲಿ ಆಶ್ಚರ್ಯವನ್ನು ತಂದಿದ್ದು, ಮತ್ತೊಂದು ಕಡೆ ಆತಂಕ ಮೂಡಿಸಿದೆ.
ಇದನ್ನೂ ಓದಿ : ಆಯತಪ್ಪಿದ ಸೋಮಣ್ಣನನ್ನ ಹಿಡಿದೆತ್ತಿದ ಸುದೀಪ್: ಫ್ಯಾನ್ಸ್ ನೂಕುನುಗ್ಗಲು, ಪೊಲೀಸರಿಂದ ಲಾಠಿ ಚಾರ್ಜ್