ಗುರುಮಠಕಲ್ ಬಿಜೆಪಿ ಅಭ್ಯರ್ಥಿ ಲಲಿತಾ ಅನಪೂರ ಟೆಂಪಲ್ ರನ್ - ಗುರುಮಠಕಲ್ ಪಟ್ಟಣದ ಖಾಸಾಮಠ
🎬 Watch Now: Feature Video
ಯಾದಗಿರಿ: ನಗರಸಭೆ ಸದಸ್ಯೆ ಹಾಗೂ ಗುರುಮಠಕಲ್ ಬಿಜೆಪಿ ಅಭ್ಯರ್ಥಿ ಲಲಿತಾ ಅನಪೂರ ಅವರು ಚುನಾವಣೆಯಲ್ಲಿ ಗೆಲುವಿಗಾಗಿ ದೇವಿಯ ಮೊರೆ ಹೋಗಿದ್ದಾರೆ. ನಗರದ 5ನೇ ವಾರ್ಡ್ನ ಶಾಂತಿ ನಗರದಲ್ಲಿರುವ ದುರ್ಗಾದೇವಿ ದೇವಾಲಯದಲ್ಲಿ ಅವರು ವಿಶೇಷ ಪೂಜೆ ಸಲ್ಲಿಸಿದರು. ಲಲಿತಾ ಅವರು ದೇವಿಯ ದರ್ಶನ ಪಡೆದು ಗುರುಮಠಕಲ್ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿದರು.
''ಬಿಜೆಪಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಹಿಳೆಯನ್ನು ಗುರುತಿಸಿ ಟಿಕೆಟ್ ನೀಡಿದೆ. ಪಕ್ಷಕ್ಕೆ ಸೇವೆ ಮಾಡಿದ್ದನ್ನು ಗುರುತಿಸಿ ಟಿಕೆಟ್ ಕೊಟ್ಟಿದೆ. ನಾನು ನಗರಸಭೆ ಸದಸ್ಯೆಯಾಗಿದ್ದು, ಟಿಕೆಟ್ ಲಭಿಸಿದ್ದರಿಂದ ತುಂಬಾ ಸಂತೋಷವಾಗಿದೆ. ಅಸಮಾಧಾನಗೊಂಡವರ ಮನವೊಲಿಸುತ್ತೇನೆ. ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತೇವೆ. ದೇವಿ ಹಾಗೂ ಜನರ ಆಶೀರ್ವಾದದಿಂದ ಗೆಲ್ಲುವ ವಿಶ್ವಾಸವನ್ನು ಲಲಿತಾ ಅನಪೂರ ವ್ಯಕ್ತಪಡಿಸಿದರು.
ಅಲ್ಲದೇ ಗುರುಮಠಕಲ್ ಪಟ್ಟಣದ ಖಾಸಾಮಠಕ್ಕೆ ಲಲಿತಾ ಅನಪೂರ ಭೇಟಿ ನೀಡಿ ಮಠದ ಗುರು ಮುರುಘಾರಾಜೇಂದ್ರ ಶ್ರೀಗಳಿಂದ ಆಶೀರ್ವಾದ ಪಡೆದರು. ನಂತರ ಪಟ್ಟಣದಲ್ಲಿರುವ ಪಕ್ಷದ ಹಿರಿಯ ಹಾಗೂ ಕಿರಿಯ ನಾಯಕರನ್ನು ಭೇಟಿ ಮಾಡಿ ಮತಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳಲು ಪ್ರತಿಯೊಬ್ಬರ ಸಹಾಯ, ಸಹಕಾರ ಬಹುಮುಖ್ಯ ಎಂದು ಮನವಿ ಮಾಡಿದರು.
ಇದನ್ನೂ ಓದಿ: ಕಮಲ ಅರಳಿಸಲು ಕೆ.ಆರ್.ಪೇಟೆಗೆ ಮತ್ತೊಮ್ಮೆ ಎಂಟ್ರಿ ಕೊಟ್ಟ ವಿಜಯೇಂದ್ರ