ಲೋಕಾಯುಕ್ತರ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದೇನೆ: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ - ಈಟಿವಿ ಭಾರತ್ ಕನ್ನಡ ಸುದ್ದಿ
🎬 Watch Now: Feature Video
ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (ಕೆಎಸ್ಡಿಎಲ್) ರಾಸಾಯನಿಕ ಖರೀದಿ ಟೆಂಡರ್ ಪ್ರಕ್ರಿಯೆಯಲ್ಲಿ ಲಂಚ ಪಡೆದ ಆರೋಪ ಎದುರಿಸುತ್ತಿರುವ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಕೆ ಮಾಡಾಳ್ ವಿರುಪಾಕ್ಷಪ್ಪ ಲೋಕಾಯುಕ್ತ ಅಧಿಕಾರಿಗಳ ತನಿಖೆಯ ನಂತರ ಪ್ರತಿಕ್ರಿಯಿಸಿದ್ದು, ನಾನು ಲೋಕಾಯುಕ್ತ ಅಧಿಕಾರಿಗಳ ತನಿಖೆಗೆ ಸಂಪೂರ್ಣ ಸಹಕಾರ ನೀಡಿದ್ದೇನೆ ಎಂದಿದ್ದಾರೆ.
ತನಿಖೆಯ ವೇಳೆ ನಡೆದಿರುವ ವಿಚಾರ ಬಹಿರಂಗಪಡಿಸುವಂತಿಲ್ಲ: ಲೋಕಾಯುಕ್ತ ಕಚೇರಿಗೆ ಹಾಜರಾಗಿ ನಂತರ ಮಾತನಾಡಿದ ಅವರು, ನಾನು ಲೋಕಾಯುಕ್ತ ಅಧಿಕಾರಿಗಳು ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಆದರೆ ತನಿಖೆಯ ವೇಳೆ ನಡೆದಿರುವ ವಿಚಾರವನ್ನು ನಾವು ಬಹಿರಂಗಪಡಿಸುವಂತಿಲ್ಲ ಎಂದರು.
ಈ ವೇಳೆ ನೀವು ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊಂದಿಷ್ಟು ಆರೋಪಗಳನ್ನು ಮಾಡಿದ್ರಿ, ನನ್ನ ಬಗ್ಗೆ ಯಾರೋ ಷಡ್ಯಂತ್ರಗಳನ್ನು ಮಾಡಿದ್ದಾರೆ ಎಂದಿದ್ರಿ, ಈ ಬಗ್ಗೆ ಏನ್ ಹೇಳುತ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ, ನಾನು ಆ ಬಗ್ಗೆ ಈಗ ಏನೂ ಹೇಳುವುದಿಲ್ಲ ಎಂದರು. ನಿಮ್ಮ ಮಗನ ಆಫೀಸ್ನಲ್ಲಿ ದುಡ್ಡು ಇಟ್ಟುಹೋಗಿದ್ರು ಎಂದೂ ಹೇಳಿದ್ರಿ. ಅದರ ಬಗ್ಗೆ ಏನಾದ್ರೂ ಎವಿಡೆನ್ಸ್ ಕೋಟ್ರಾ ಎಂಬ ಪ್ರಶ್ನೆಗೆ, ನಾನು ಈಗ ಒಂದು ಮಾತನ್ನು ಹೇಳುತ್ತೇನೆ. ಮಾಧ್ಯಮದವರು ಮಾತನಾಡಿ ಅಂತಾ ಹೇಳ್ತೀರಿ, ಆ ವೇಳೆ ನಾವು ಏನು ಹೇಳಿರುತ್ತೇವೆ ಎಂಬುದರ ಅರಿವು ನಮಗಿರುವುದಿಲ್ಲ ಹಾಗಾಗಿ ನಾನು ಒಂದನ್ನು ಸ್ಪಷ್ಟಪಡಿಸುತ್ತೇನೆ, ಲೋಕಾಯುಕ್ತರ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಿದ್ದೇನೆ ಎಂದರು.
ಇದನ್ನೂ ಓದಿ : ಲೋಕಾಯುಕ್ತ ಪೊಲೀಸರ ಮುಂದೆ ಹಾಜರಾದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ