ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ ಬಿ ವೈ ವಿಜಯೇಂದ್ರ: ಭುಜ ತಟ್ಟಿ ಹಾರೈಸಿದ ಸಿಎಂ ಸಿದ್ದರಾಮಯ್ಯ.. ವಿಡಿಯೋ
🎬 Watch Now: Feature Video
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ, ಶಿಕಾರಿಪುರದ ನೂತನ ಶಾಸಕ ಬಿ.ವೈ. ವಿಜಯೇಂದ್ರ ಶಾಸಕರಾಗಿ ಚುನಾಯಿತರಾದ ಬಳಿಕ ಇಂದು ಮೊದಲ ಬಾರಿಗೆ ವಿಧಾನಸೌಧಕ್ಕೆ ಪ್ರವೇಶ ನೀಡಿದರು. ವಿಧಾನಸೌಧದ ಮೆಟ್ಟಿಲಿಗೆ ಬಾಗಿ ಕೈಮುಗಿದು ನಮಸ್ಕರಿಸಿ ಒಳಗೆ ಬಂದರು. ವಿಧಾನಸಭೆಯ ಮೊಗಸಾಲೆಗೆ ಬರುತ್ತಿದ್ಧಂತೆ ವಿಜಯೇಂದ್ರ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರಾದರು.
ಈ ಸಂದರ್ಭದಲ್ಲಿ ಸಿದ್ದರಾಮಯ್ಯನವರನ್ನು ಕಂಡ ಕೂಡಲೇ ವಿಜಯೇಂದ್ರ ನಮಸ್ಕರಿಸಿದರು. ಉಭಯ ನಾಯಕರು ಕೂಡ ನುಗುತ್ತಲೇ ಕೈ ಕುಲುಕಿ ಮಾತನಾಡಿದರು. ಇದೇ ಕ್ಷಣದಲ್ಲಿ ಸಿಎಂ ನೂತನ ಶಾಸಕರಾಗಿ ಬಂದ ವಿಜಯೇಂದ್ರ ಅವರಿಗೆ ಭುಜ ತಟ್ಟಿ ಶುಭ ಕೋರಿದರು. ಸಿಎಂ ಜೊತೆಯಲ್ಲಿದ್ದ ಕಾಂಗ್ರೆಸ್ ಶಾಸಕ ಯು ಟಿ ಖಾದರ್ ಅವರಿಗೆ ವಿಜಯೇಂದ್ರ ಕೈ ಕುಲುಕಿ ಮಾತನಾಡಿದರು.
ಬಳಿಕ ಸಚಿವ ಕೆ.ಹೆಚ್. ಮುನಿಯಪ್ಪ, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ತನ್ವೀರ್ ಸೇಠ್ ಸೇರಿ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿ ಪರಸ್ಪರ ಅಭಿನಂದಿಸಿದರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ವಿಜಯೇಂದ್ರ ತಮ್ಮ ತಂದೆಯ ಅಖಾಡ, ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಮತ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇಂದು ವಿಧಾನಸಭೆಯಲ್ಲಿ ಶಾಸಕರಾಗಿ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸೋಮವಾರದಿಂದ ನೂತನ ಶಾಸಕರ ಪ್ರತಿಜ್ಞಾವಿಧಿ ಕಾರ್ಯ ನಡೆಯುತ್ತಿದ್ದು, ನಾಳೆ ನೂತನ ಸ್ಫೀಕರ್ ಆಯ್ಕೆ ನಡೆಯಲಿದೆ.
ಇದನ್ನೂ ಓದಿ: ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ ಶಾಸಕ ಯು ಟಿ ಖಾದರ್.. ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಸಾಥ್