'ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಬೇಕು, ನೀವೇ ಮುತುವರ್ಜಿ ವಹಿಸಬೇಕು'- ಶಾಸಕ ಪೂಂಜಾಗೆ ಕಾರ್ಯಕರ್ತನ ಮನವಿ - mla harish poonja
🎬 Watch Now: Feature Video
ಸುಳ್ಯ(ದಕ್ಷಿಣ ಕನ್ನಡ): ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ತನಿಖೆ ಸಂಬಂಧ ನೀವೇ ಮುತುವರ್ಜಿ ವಹಿಸಬೇಕು. ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ಕೊಡಿಸಬೇಕು. ಇನ್ನು ಮುಂದೆ ದಕ್ಷಿಣ ಕನ್ನಡದಲ್ಲಿ ಇಂತಹ ಕೊಲೆಗಳು ಆಗಬಾರದು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಲ್ಲಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಶವಯಾತ್ರೆಯ ಸಮಯದಲ್ಲಿ ಕಾರಿನಲ್ಲೇ ಕುಳಿತ ಕಾರ್ಯಕರ್ತನೊಬ್ಬ ಮತ್ತೊಂದು ಕಾರಿನಲ್ಲಿ ಹೋಗುತ್ತಿದ್ದ ಶಾಸಕ ಹರೀಶ್ ಪೂಂಜಾ ಅವರಲ್ಲಿ ಈ ಬಗ್ಗೆ ಕ್ರಮ ಆಗಬೇಕೆಂದು ಹೇಳಿರುವ ವಿಡಿಯೋ ಇದಾಗಿದೆ.
Last Updated : Feb 3, 2023, 8:25 PM IST