ಚಿಕ್ಕ ತಿರುಪತಿ ಬಿಳಿಗಿರಿಬನದಲ್ಲಿ ಸಂಭ್ರಮದ ರಥೋತ್ಸವ - ಬಿಳಿಗಿರಿರಂಗನ ಬೆಟ್ಟದಲ್ಲಿ ರಥೋತ್ಸವ

🎬 Watch Now: Feature Video

thumbnail

By

Published : May 4, 2023, 5:12 PM IST

ಚಾಮರಾಜನಗರ : ದಟ್ಟ ಕಾನನದ ಮಧ್ಯೆ ನೆಲೆಗೊಂಡಿರುವ ಸೋಲಿಗರು ಮತ್ತು ವೈಷ್ಣವರ ಆರಾಧ್ಯ ದೈವರಾದ ಬಿಳಿಗಿರಿರಂಗನಾಥ ದೇವರ ರಥೋತ್ಸವ ಇಂದು ವಿಜೃಂಭಣೆಯಿಂದ ನಡೆಯಿತು.

ಇದನ್ನೂ ಓದಿ: ವಿಜಯಪುರ: ಗೋಲ್ಲಾಳೇಶ್ವರ, ಬಸವೇಶ್ವರ ರಥೋತ್ಸವದಲ್ಲಿ ಇಬ್ಬರು ಭಕ್ತರ ಸಾವು

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ರಥೋತ್ಸವ ಇಂದು ಮಧ್ಯಾಹ್ನ ಶುಭ ಲಗ್ನದಲ್ಲಿ ನಡೆಯಿತು.‌ ಅಂದಾಜು 80 ಸಾವಿರಕ್ಕೂ ಅಧಿಕ‌ ಮಂದಿ ಭಕ್ತರು ರಥೋತ್ಸವದಲ್ಲಿ ಭಾಗಿಯಾಗಿದ್ದರು. ಜಿಲ್ಲೆ, ಹೊರ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಬರುವುದರಿಂದ ವಾಹನ ದಟ್ಟಣೆ ನಿಯಂತ್ರಣಕ್ಕಾಗಿ ಬೆಟ್ಟಕ್ಕೆ ದ್ವಿಚಕ್ರ ವಾಹನಗಳ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ಇದನ್ನೂ ಓದಿ: ಅದ್ಧೂರಿಯಾಗಿ ನೆರವೇರಿದ ಹಂಪಿ ಶ್ರೀ ವಿರೂಪಾಕ್ಷೇಶ್ವರ ಬ್ರಹ್ಮರಥೋತ್ಸವ

ಸೋಲಿಗರ ಹುಡುಗಿ ಕುಸುಮಾಲೆಯ ಸೌಂದರ್ಯಕ್ಕೆ ಸೋತು, ಅವಳನ್ನು ವರಿಸಿ ವಿವಾಹವಾಗುವ ಮೂಲಕ ರಂಗನಾಥ ಸ್ವಾಮಿ ಇಲ್ಲಿನ ಬುಡಕಟ್ಟು ಜನರ ಆರಾಧ್ಯ ದೈವನಾಗಿ ರೂಪುಗೊಂಡಿದ್ದು, ಇಂದಿಗೂ ಗಿರಿಜನರು ದೇವರನ್ನು 'ಬಾವ' ಎಂದೇ ಕರೆಯುತ್ತಾರೆ ಎಂಬುದು ಐತಿಹ್ಯವಾಗಿದೆ.

ಇದನ್ನೂ ಓದಿ: 9 ವರ್ಷಗಳ ಬಳಿಕ ನಡೆದ ಬಿಳಿಗಿರಿರಂಗನಾಥ ಜಾತ್ರೆ : ಸಾವಿರಾರು ಭಕ್ತರು ಭಾಗಿ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.