ಸ್ಕೂಟರ್ ಕಳವಿಗೆ ಬಂದು ಹೆಲ್ಮೆಟ್ ಹೊತ್ತೊಯ್ದರು: ಸಿಸಿಟಿವಿ ದೃಶ್ಯ - CCTV visuals found
🎬 Watch Now: Feature Video
ಪುತ್ತೂರು (ದಕ್ಷಿಣಕನ್ನಡ): ಇಲ್ಲಿನ ಕುಂಬ್ರ ಎಂಬಲ್ಲಿ ನ್ಯೂ ರಾಯಲ್ ದರ್ಬಾರ್ ಹೋಟೆಲ್ ಬಳಿ ನಿಲ್ಲಿಸಲಾಗಿದ್ದ ದ್ವಿಚಕ್ರವಾಹನವನ್ನು ಕಳವು ಮಾಡಲು ಯತ್ನಿಸಿರುವ ಘಟನೆ ನಡೆದಿದೆ. ಸೆ 18 ರಂದು ರಾತ್ರಿ ಕಳವಿಗೆ ಯತ್ನ ನಡೆದಿದ್ದು, ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಾಯಲ್ ದರ್ಬಾರ್ ಹೋಟೆಲ್ ಮಾಲೀಕ ಹಮೀದ್ ಅವರು ತನ್ನ ಸ್ಕೂಟರನ್ನು ಹೋಟೆಲ್ ಮುಂಭಾಗದಲ್ಲಿ ನಿಲ್ಲಿಸಿ ಮಂಗಳೂರಿಗೆ ತೆರಳಿದ್ದರು. ಮಂಗಳೂರಿನಿಂದ ಬರುವಾಗ ತಡವಾಗಿದ್ದ ಕಾರಣ ಸ್ಕೂಟರ್ ಅನ್ನು ಮನೆಗೆ ಕೊಂಡು ಹೋಗಿರಲಿಲ್ಲ. ಅದೇ ದಿನ ರಾತ್ರಿ ಅಲ್ಲಿಗೆ ಸ್ಕೂಟರಿನಲ್ಲಿ ಬಂದ ಇಬ್ಬರು ಯುವಕರು ಸ್ಕೂಟರ್ ಕಳವು ಮಾಡಲು ಯತ್ನಿಸಿದ್ದಾರೆ. ಆದರೆ, ದ್ವಿಚಕ್ರ ವಾಹನ ಹ್ಯಾಂಡ್ ಲಾಕ್ ಆಗಿದ್ದ ಕಾರಣ, ಸ್ಕೂಟರಿನಲ್ಲಿದ್ದ ಹೆಲ್ಮೆಟ್ ಕಳವು ಮಾಡಿದ್ದಾರೆ. ಘಟನೆಯ ಸಂಬಂಧ ಗ್ರಾಮಾಂತರ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Last Updated : Feb 3, 2023, 8:28 PM IST