ಡಿಎಂಕೆ ಸಭೆ ವೇಳೆ 'ಭಾರತ್ ಮಾತಾ ಕೀ ಜೈ' ಘೋಷಣೆ : ಅಡ್ಡಗಟ್ಟಿ ಕಾರು ಪುಡಿ ಮಾಡಿದ ಕಾರ್ಯಕರ್ತರು - ಭಾರತ್ ಮಾತಾ ಕೀ ಜೈ

🎬 Watch Now: Feature Video

thumbnail

By

Published : Jul 4, 2023, 6:50 PM IST

ತೆಂಕಾಶಿ (ತಮಿಳುನಾಡು) : ಡಿಎಂಕೆ ಪಕ್ಷದ ಸಾರ್ವಜನಿಕ ಸಭೆ ವೇಳೆ ಭಾರತ್ ಮಾತಾ ಕೀ ಜೈ ಎಂದು ಷೋಷಣೆ ಕೂಗಿಕೊಂಡು ರಸ್ತೆಯಲ್ಲಿ ಹೋದ ಕಾರನ್ನು ಅಡ್ಡಗಟ್ಟಿ  ಯುವಕರ ಮೇಲೆ ಹಲ್ಲೆ ನಡೆಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಇಲ್ಲಿನ ತೆಂಕಾಶಿ ಜಿಲ್ಲೆಯ ಪಾವೂರುಚಾತಿರಂನಲ್ಲಿ  ಡಿಎಂಕೆ ವತಿಯಿಂದ ಮಾಜಿ ಸಿಎಂ ಕರುಣಾನಿಧಿ ಅವರ ಶತಮಾನೋತ್ಸವ ಹಿನ್ನೆಲೆ ಸಾರ್ವಜನಿಕ ಸಭೆ  ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಡಿಎಂಕೆ ಸಂಘಟನಾ ಕಾರ್ಯದರ್ಶಿ ಆರ್.ಎಸ್.ಭಾರತಿ, ಡಿಎಂಕೆ ಜಿಲ್ಲಾ  ಕಾರ್ಯದರ್ಶಿ ಶಿವಪದ್ಮನಾಥನ್  ಸೇರಿದಂತೆ  ಹಲವು ನಾಯಕರು ಭಾಗವಹಿಸಿದ್ದರು.

ಸಾರ್ವಜನಿಕ ಸಭೆಯನ್ನು ಮುಗಿಸಿ  ಆರ್.ಎಸ್.ಭಾರತಿ ಅವರು ತೆರಳುತ್ತಿದ್ದಾಗ  ನೆಲ್ಲೈ - ತೆಂಕಾಶಿ ರಸ್ತೆಯಲ್ಲಿ ಕಾರೊಂದು ಬಂದಿದೆ. ಈ ವೇಳೆ ಕಾರಿನಲ್ಲಿದ್ದವರು ಡಿಎಂಕೆ ಧ್ವಜಗಳನ್ನು ಮತ್ತು ಕಾರ್ಯಕರ್ತರನ್ನು ಕಂಡು ಭಾರತ್​ ಮಾತಾ ಕೀ ಜೈ  ಎಂದು ಘೋಷಣೆ ಕೂಗಿದ್ದಾರೆ. ಈ ಸಂದರ್ಭ ಅಲ್ಲೇ ಇದ್ದ ಡಿಎಂಕೆ ಕಾರ್ಯಕರ್ತರು ಕಾರನ್ನು ಅಡ್ಡಗಟ್ಟಿ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ. 

ಪೊಲೀಸರು ಮತ್ತು ಡಿಎಂಕೆ ನಾಯಕ ಭಾರತಿ ಅವರ ಮುಂದೆಯೇ ಸುಮಾರು 30ಕ್ಕೂ ಅಧಿಕ ಕಾರ್ಯಕರ್ತರು ಹಲ್ಲೆ ಯುವಕರ ಮೇಲೆ ನಡೆಸಿದ್ದಾರೆ. ಅಲ್ಲದೇ ಡಿಎಂಕೆ ಸಭೆ ನಡೆಯುವ ಸ್ಥಳಕ್ಕೆ ಬಂದು ಭಾರತ್​ ಮಾತಾ ಕೀ ಜೈ ಎಂದು  ಘೋಷಣೆ ಕೂಗುವುದು ಯಾಕೆ ಎಂದು ಪ್ರಶ್ನಿಸಿ ಕಾರಿನ ಗಾಜನ್ನು ಪುಡಿ ಮಾಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಡಿಎಂಕೆ ಕಾರ್ಯಕರ್ತರನ್ನು ಸ್ಥಳದಿಂದ ಚದುರಿಸಿ, ಕಾರಿನಲ್ಲಿದ್ದವರನ್ನು ಸ್ಥಳದಿಂದ ತೆರಳಲು ಅನುವು ಮಾಡಿಕೊಟ್ಟಿದ್ದಾರೆ. ಘಟನೆಯಿಂದಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾರಿನಲ್ಲಿ ತೆರಳುತ್ತಿದ್ದ ಯುವಕರು  ನೆಲ್ಲೈ ಜಿಲ್ಲೆಯ ಪಾಲಯಂ ಕೊಟ್ಟೈ ನವರಾಗಿದ್ದು, ತೆಂಕಾಶಿಯ ಕುಟ್ರಾಲಂ ಜಲಪಾತಕ್ಕೆ ಸ್ನಾನಕ್ಕೆಂದು ತೆರಳಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ : Watch.. ಸ್ಕಿಡ್ ಆಗಿ ವೇಗದಲ್ಲಿ ಬಂದು ಗುದ್ದಿದ ಕಾರು: ತಾಯಿ, ಮಗಳು ಸೇರಿ ಮೂವರ ದುರ್ಮರಣ.. ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.