ಮಹಾರಾಷ್ಟ್ರದಲ್ಲಿ 5ನೇ ದಿನದ ಭಾರತ್ ಜೋಡೋ: ನಾಂದೇಡ್ನಿಂದ ರಾಹುಲ್ ನಡಿಗೆ ಆರಂಭ - Congress leader Rahul Gandhi
🎬 Watch Now: Feature Video

ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಮಹಾರಾಷ್ಟ್ರದಲ್ಲಿ ಇಂದು ಐದನೇ ದಿನಕ್ಕೆ ಕಾಲಿಟ್ಟಿದೆ. ವರಿಷ್ಠ ನಾಯಕ ರಾಹುಲ್ ಗಾಂಧಿ ಅವರು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಬೆಳಗ್ಗೆ ಅರ್ಧಾಪುರ ನಾಂದೇಡ್ನಿಂದ ಯಾತ್ರೆ ಪ್ರಾರಂಭಿಸಿದರು. ಇಲ್ಲಿಂದ ಶುರುವಾದ ಯಾತ್ರೆ ನಾಂದೇಡ್ ನಗರ, ದೇಗ್ಲೂರು ಮತ್ತು ಅರ್ಧಾಪುರ ಪ್ರದೇಶಗಳ ಮೂಲಕ ಹಿಂಗೋಲಿ ತಲುಪಲಿದೆ. ಎನ್‌ಸಿಪಿ ನಾಯಕರಾದ ಸುಪ್ರಿಯಾ ಸುಳೆ, ಜಿತೇಂದ್ರ ಅವ್ಹಾದ್ ಮತ್ತು ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್ ಅವರು ದಾರಿಮಧ್ಯೆ ರಾಹುಲ್ ಅವರನ್ನು ಸೇರಿಕೊಳ್ಳಲು ನಿರ್ಧರಿಸಿದ್ದಾರೆ. ಸಾರ್ವಜನಿಕ ಸಭೆಯಲ್ಲೂ ಭಾಗವಹಿಸಲಿದ್ದಾರೆ. ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಶಿವಸೇನೆ ನಾಯಕ ಆದಿತ್ಯ ಠಾಕ್ರೆ ಕೂಡ ಪಾಲ್ಗೊಳ್ಳಲಿದ್ದಾರೆ. ಸೆಪ್ಟೆಂಬರ್ 7 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾದ ಭಾರತ್ ಜೋಡೋ ಯಾತ್ರೆ ಇಂದಿಗೆ 65ನೇ ದಿನಕ್ಕೆ ತಲುಪಿದೆ.
Last Updated : Feb 3, 2023, 8:32 PM IST