ಹಿರಿಯ ನಟಿ ಲೀಲಾವತಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ನಟ ದರ್ಶನ್ - ವಯೋಸಹಜ ಕಾಯಿಲೆ
🎬 Watch Now: Feature Video
Published : Nov 27, 2023, 1:18 PM IST
|Updated : Nov 27, 2023, 3:30 PM IST
ಬೆಂಗಳೂರು: ಅನಾರೋಗ್ಯಕ್ಕೊಳಗಾಗಿರುವ ಹಿರಿಯ ನಟಿ ಡಾ ಲೀಲಾವತಿ ಅವರನ್ನು ಚಿತ್ರರಂಗದ ಕಲಾವಿದರು ಸೇರಿದಂತೆ ಅನೇಕ ಗಣ್ಯರು ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿದ್ದಾರೆ. ಭಾನುವಾರ ನಟ ದರ್ಶನ್ ಅವರು ನಟಿ ಲೀಲಾವತಿ ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನೆಲಮಂಗಲ ತಾಲೂಕಿನ ಸೊಲದೇವನಹಳ್ಳಿಯಲ್ಲಿ ಇರುವ ಲೀಲಾವತಿ ಅವರ ಮನೆಗೆ ಭೇಟಿ ನೀಡಿದ್ದರು. ಹಿರಿಯ ನಟಿ ಅವರನ್ನು ಮಾತನಾಡಿಸಿ, ಆರೋಗ್ಯದ ಕುರಿತು ಅವರ ಪುತ್ರ ವಿನೋದ್ ರಾಜ್ ಅವರಿಂದ ಮಾಹಿತಿ ಪಡೆದುಕೊಂಡರು. ದರ್ಶನ್ ಭೇಟಿ ವೇಳೆ ಅಮ್ಮ ಯಾರು ಬಂದಿದ್ದಾರೆ, ನೋಡು ಅಂತ ಮಗ ವಿನೋದ್ ರಾಜ್ ಹೇಳುತ್ತಿದ್ದರು.
ಲೀಲಾವತಿ ಅವರ ಅನಾರೋಗ್ಯ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ಅನೇಕ ಗಣ್ಯರು ಮತ್ತು ಚಿತ್ರರಂಗದ ಕಲಾವಿದರು ಅವರ ಮನೆಗೆ ತೆರಳಿ ಆರೋಗ್ಯವನ್ನು ವಿಚಾರಿಸುತ್ತಿದ್ದಾರೆ. ಬಹುಭಾಷೆ ನಟ ಅರ್ಜನ್ ಸರ್ಜಾ, ಹಿರಿಯ ನಟಿ ಸರೋಜಾದೇವಿ ಸಹ ಕೆಲ ದಿನಗಳ ಹಿಂದೆ ಲೀಲಾವತಿ ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದರು.
ಓದಿ: ಮನೆಗೆಲಸದ ಯುವತಿಗೆ ತಾವೇ ಮುಂದೆ ನಿಂತು ಮದುವೆ ಮಾಡಿಸಿದ ವಿನೋದ್ ರಾಜ್