ವಿಜಯನಗರ: ಹಾಡಹಗಲೇ ಹಂಪಿ ಕನ್ನಡ ವಿವಿ ಆವರಣದಲ್ಲಿ ಕರಡಿ ಪ್ರತ್ಯಕ್ಷ - ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕರಡಿ ಪತ್ತೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15637067-thumbnail-3x2-sanju.jpg)
ಹೊಸಪೇಟೆ ತಾಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕರಡಿಯೊಂದು ಪ್ರತ್ಯಕ್ಷವಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ವಿವಿ ಆವರಣದಲ್ಲಿ ಸುತ್ತಾಡುತ್ತಿದ್ದ ಕರಡಿ ಕಂಡು ವಿದ್ಯಾರ್ಥಿಗಳು ತಮ್ಮ ಮೊಬೈಲ್ನಲ್ಲಿ ವಿಡಿಯೋ ಸೆರೆಹಿಡಿದಿದ್ದಾರೆ. ಹಗಲಿನ ಹೊತ್ತಲ್ಲೇ ಕರಡಿ ರಾಜಾರೋಷವಾಗಿ ವಿವಿಯ ಗಿರಿಸೀಮೆಯ ಬಳಿ ಸೇರಿದಂತೆ ನಾನಾ ಕಡೆ ಓಡಾಟ ಮಾಡುತ್ತಿರುವುದು ವಿದ್ಯಾರ್ಥಿಗಳನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಪಕ್ಕದಲ್ಲಿಯೇ ದರೋಜಿ ಕರಡಿ ಧಾಮವಿದೆ. ಹೀಗಾಗಿ ಇಲ್ಲಿ ಸಹಜವಾಗಿಯೇ ಕರಡಿಗಳ ಕಾಟ ಹೆಚ್ಚಾಗಿಯೇ ಇದೆ.
Last Updated : Feb 3, 2023, 8:24 PM IST