ಪೆಟ್ಟಿಗೆ ಅಂಗಡಿಗಳ ಮೇಲೆ ಕರಡಿ ದಾಳಿ: ಮೊಟ್ಟೆ, ದಿನಸಿ ಪದಾರ್ಥಗಳು ಧ್ವಂಸ - ಪೆಟ್ಟಿಗೆ ಅಂಗಡಿಗಳ ಮೇಲೆ ಕರಡಿ ದಾಳಿ
🎬 Watch Now: Feature Video
Published : Dec 9, 2023, 2:16 PM IST
ಚಾಮರಾಜನಗರ : ಕಾಡಿನಿಂದ ದಾರಿ ತಪ್ಪಿ ಊರಿಗೆ ಬಂದ ಕರಡಿಯೊಂದು ಆಹಾರಕ್ಕಾಗಿ ಪೆಟ್ಟಿಗೆ ಅಂಗಡಿಗಳಿಗೆ ನುಗ್ಗಿ ಅಲ್ಲಿದ್ದ ಮೊಟ್ಟೆ ಹಾಗೂ ಇನ್ನಿತರ ಪದಾರ್ಥಗಳನ್ನು ತಿಂದು ದ್ವಂಸ ಮಾಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅಜ್ಜೀಪುರ ಗ್ರಾಮದಲ್ಲಿ ನಡೆದಿದೆ.
ಹನೂರು ತಾಲೂಕಿನ ಅಜ್ಜೀಪುರ ಗ್ರಾಮದ ಅಣತಿ ದೂರದಲ್ಲಿ ಇರುವ ಕಾಡಿನಿಂದ ದಾರಿತಪ್ಪಿ ಬಂದ ಕರಡಿ ಇಂದು ಮುಂಜಾನೆ ಬಾರ್ವೊಂದರ ಬಳಿ ಇದ್ದ ತೇಜು, ಬಚ್ಚೇಗೌಡ ಎಂಬುವರ ಅಂಗಡಿಗಳಲ್ಲಿ ದಾಂಧಲೆ ನಡೆಸಿದೆ.
ಇದನ್ನೂ ಓದಿ : ಹಾಸನ... ಕರಡಿ ದಾಳಿ ವೃದ್ಧ ರೈತನಿಗೆ ಗಂಭೀರ ಗಾಯ: ಆಸ್ಪತ್ರೆಗೆ ದಾಖಲು
ಕರಡಿ ಅಂಗಡಿ ಪ್ರವೇಶ ಮಾಡುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಅರಣ್ಯ ಅಧಿಕಾರಿಗಳು ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೊಂದೆಡೆ, ಕರಡಿ ಹಠತ್ತಾಗಿ ಆಗಮಿಸಿ ಅಂಗಡಿಯೊಳಗೆ ನುಗ್ಗಿ ದ್ವಂಸ ಮಾಡಿರುವುದರಿಂದ ಗ್ರಾಮಸ್ಥರು ಭಯದಲ್ಲಿದ್ದಾರೆ.
ಇದನ್ನೂ ಓದಿ : ಕೊಪ್ಪಳ : ವ್ಯಕ್ತಿ ಮೇಲೆ ನಾಲ್ಕು ಕರಡಿಗಳಿಂದ ದಾಳಿ, ಆಸ್ಪತ್ರೆಗೆ ದಾಖಲು