ಬಿಡಿ ಹಳ್ಳಿ ಅಕ್ವಾಡಕ್ಟ್ ರಿಪೇರಿ ಕಾಮಗಾರಿ ತಾತ್ಕಾಲಿಕ ಪೂರ್ಣ: ಶ್ರೀರಾಮುಲುಗೆ ರೈತರ ಧನ್ಯವಾದ
🎬 Watch Now: Feature Video
ಬಳ್ಳಾರಿ: ಕಳೆದ 25 ದಿನಗಳಿಂದ ಸಮಸ್ಯೆಗೆ ಸಿಲುಕಿದ್ದ ಅಂದಾಜು 3 ಲಕ್ಷ ಎಕರೆ ಜಮೀನಿನಲ್ಲಿ ಬೆಳೆ ಬೆಳೆದಿರುವ ರೈತರು ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದೊಂದು ವಾರದಿಂದ ಆರಂಭಗೊಂಡಿದ್ದ ಬಿಡಿ ಹಳ್ಳಿ ಅಕ್ವಾಡಕ್ಟ್ ರಿಪೇರಿ ಕಾಮಗಾರಿ ತಾತ್ಕಾಲಿಕವಾಗಿ ಪೂರ್ಣಗೊಂಡಿದೆ. ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಪಿಲ್ಲರ್ ನಿರ್ಮಾಣ ಕೆಲಸ ಮುಗಿಯಿತು. ಸಚಿವ ಬಿ.ಶ್ರೀರಾಮುಲು, ಗ್ರಾಮೀಣ ಕ್ಷೇತ್ರದ ಶಾಸಕ ಬಿ.ನಾಗೇಂದ್ರ, ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಸ್ಥಳದಲ್ಲಿ ಹಾಜರಿದ್ದರು. ಪಿಲ್ಲರ್ ಕೆಲಸ ಪೂರ್ಣಗೊಳ್ಳುತ್ತಿದ್ದಂತೆ ಗ್ರಾಮಸ್ಥರು ಮತ್ತು ರೈತರು, ಜಿಲ್ಲಾಡಳಿತ, ಸಚಿವರು ಹಾಗೂ ಶಾಸಕರಿಗೆ ಧನ್ಯವಾದ ತಿಳಿಸಿದರು. ಗುರುವಾರ ಬೆಳಿಗ್ಗೆ ಕಾಲುವೆ ಮೂಲಕ ನೀರು ಹರಿಸಲಾಯಿತು.
Last Updated : Feb 3, 2023, 8:31 PM IST