ಅಂದು ವಿಜಯೇಂದ್ರರಿಗೆ ಇಂದು ಆರಗ ಜ್ಞಾನೇಂದ್ರರಿಗೆ ಬಂಜಾರರ ವಿರೋಧ - ಚುನಾವಣಾ ಪ್ರಚಾರ
🎬 Watch Now: Feature Video
ಶಿವಮೊಗ್ಗ: ಚುನಾವಣಾ ಪ್ರಚಾರಕ್ಕೆ ಹೋಗಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಬಂಜಾರ ಸಮುದಾಯ ವಿರೋಧ ವ್ಯಕ್ತಪಡಿಸಿದ ಘಟನೆ ಇಂದು ನಡೆದಿದೆ. ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರವಾದ ಶಿವಮೊಗ್ಗ ತಾಲೂಕಿನ ಮಂಡೇನಕೊಪ್ಪದಲ್ಲಿ ಇಂದು ಆರಗ ಜ್ಞಾನೇಂದ್ರ ಪ್ರಚಾರಕ್ಕೆ ಹೋದಾಗ ಅಲ್ಲಿನ ಯುವಕರು ತಮ್ಮ ಸೇವಾಲಾಲ್ ಅವರ ಬಾವುಟ ಹಿಡಿದು ವಿರೋಧ ವ್ಯಕ್ತಪಡಿಸಿದ್ದಾರೆ. ತಾಂಡಾ ಬಚಾವೋ, ಬಿಜೆಪಿ ಹಠಾವೋ ಎಂದು ಘೋಷಣೆ ಕೂಗಿದ್ದಾರೆ.
ಗೃಹ ಸಚಿವರು ಇಂದು ಮತ್ತೂರು ಹೋಬಳಿಯ ಗ್ರಾಮಗಳಲ್ಲಿ ತಮ್ಮ ಚುನಾವಣಾ ಪ್ರಚಾರಕ್ಕೆ ಹೋಗಿದ್ದಾರೆ. ಈ ವೇಳೆ ಮಂಡೇನಕೊಪ್ಪ ತಾಂಡಾಕ್ಕೆ ಹೋದಾಗ ಬಂಜಾರ ಯುವಕರು ಗೃಹ ಸಚಿವರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಒಳ ಮೀಸಲಾತಿ ವಿಚಾರದಲ್ಲಿ ತಮಗೆ ಇದ್ದ ಮೀಸಲಾತಿಯನ್ನು ಕಡಿತಗೊಳಿಸಿದ್ದು ಖಂಡನೀಯ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಗ್ರಾಮದಲ್ಲಿ ಪಾದಯಾತ್ರೆ ನಡೆಸದಂತೆ ತಡೆದಿದ್ದಾರೆ. ನಂತರ ಗೃಹ ಸಚಿವರು ಮುಂದಿನ ಗ್ರಾಮಕ್ಕೆ ಪ್ರಚಾರಕ್ಕೆ ತೆರಳಿದ್ದಾರೆ. ಕಳೆದ ವಾರ ಶಿಕಾರಿಪುರ ತಾಲೂಕು ತರಲಘಟ್ಟ ತಾಂಡಾದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ವಿಜಯೇಂದ್ರ ಅವರು ಪ್ರಚಾರಕ್ಕೆ ಹೋದಾಗ ಇದೇ ರೀತಿ ಬಂಜಾರ ಯುವಕರು ವಿರೋಧ ವ್ಯಕ್ತಪಡಿಸಿದ್ದರು.
ಇದನ್ನೂ ನೋಡಿ: ಶಿಗ್ಗಾಂವಿಯಲ್ಲಿ ಸಿಎಂ ಬೊಮ್ಮಾಯಿ ಪತ್ನಿ, ಮಗನಿಂದ ಭರ್ಜರಿ ಮತಬೇಟೆ