ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 3ನೇ ವರ್ಷದ ಘಟಿಕೋತ್ಸವ.. ವಿಡಿಯೋ

🎬 Watch Now: Feature Video

thumbnail

ಕೋಲಾರ​ : ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 3ನೇ ವರ್ಷದ ಘಟಿಕೋತ್ಸವವನ್ನ ಕೋಲಾರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮೂವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವ ಡಾಕ್ಟರೇಟ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ರ‍್ಯಾಂಕ್‌​ ಪಡೆದ 44 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೌರವಿಸಿದರು.

ಕೋಲಾರ ನಗರ ಹೊರವಲಯದ ನಂದಿನಿ ಪ್ಯಾಲೇಸ್ ಸಭಾಂಗಣದಲ್ಲಿಂದು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್​ ಪದವಿ ಪ್ರಧಾನ ಮಾಡಿದ್ರು.  ಸಾಂಸ್ಕೃತಿಕ ಕ್ಷೇತ್ರದಿಂದ ತಮಟೆ ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ, ಸಾಮಾಜಿಕ ಕ್ಷೇತ್ರದಿಂದ ಪತ್ರಕರ್ತ ದಲಿತಹೋರಾಟಗಾರ ಸಿಎಂ ಮುನಿಯಪ್ಪ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಿಂದ ಸೌರಶಕ್ತಿ ಮಹತ್ವ ಸಾರಿದ ಹರೀಶ್ ಹಂದೆ ಅವರಿಗೆ ಗೌರವ ಡಾಕ್ಟರೇಟ್​ ನೀಡಿ ಗೌರವಿಸಲಾಯಿತು. 

ವಿಶೇಷ ಆಹ್ವಾನಿತರಾಗಿ ಬಂದಿದ್ದ ಪರಿಸರವಾದಿ ಹಾಗೂ ಪತ್ರಕರ್ತ ಸಾಯಿಸಾಥ್​ ಅವರು, ಇತಿಹಾಸ ಹಾಗೂ ಇತಿಹಾಸದ ಮೌಲ್ಯದ ಕುರಿತು ವಿವಿಗಳು ಮೌಲ್ಯಯುತ ಶಿಕ್ಷಣ ನೀಡುವ ಕಡೆ ಹೆಚ್ಚು ಒತ್ತು ನೀಡುವಂತೆ ತಿಳಿಸಿದ್ರು. ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ತನ್ನ ಮೂರನೇ ಘಟಿಕೋತ್ಸವವನ್ನು ಅದ್ದೂರಿಯಾಗಿ ಮಾಡಿ, ಹತ್ತು ಹಲವು ಕನಸುಗಳನ್ನ ಕಟ್ಟಿಕೊಂಡು ವಿದ್ಯಾಭ್ಯಾಸ ಮಾಡಿದ್ದ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಸಂತಸ ತಂದಿತ್ತು.

ಇದನ್ನೂ ಓದಿ: ತೋಟಗಾರಿಕೆ ವಿವಿ 12ನೇ ಘಟಿಕೋತ್ಸವ:16 ಚಿನ್ನ ಮುಡಿಗೇರಿಸಿಕೊಂಡ ಗ್ರಾಮೀಣ ಪ್ರತಿಭೆ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.