ಮನೆಯ ಪ್ರೀತಿಯ ಶ್ವಾನಕ್ಕೆ ಸಂಭ್ರಮದ ಸೀಮಂತ: ವಿಡಿಯೋ - ರೂಬಿಗೆ ಸೀಮಂತ ಕಾರ್ಯಕ್ರಮ
🎬 Watch Now: Feature Video
Published : Jan 12, 2024, 11:36 AM IST
ಚಿತ್ರದುರ್ಗ: ಮಹಿಳೆಯರು ಗರ್ಭಿಣಿಯಾದಾಗ ಸೀಮಂತ ಕಾರ್ಯಕ್ರಮ ಮಾಡುವುದು ಸಾಮಾನ್ಯ. ಆದರೆ ಇಲ್ಲೊಂದೆಡೆ ಪ್ರೀತಿಯ ಸಾಕು ನಾಯಿಗೂ ಸಂಪ್ರದಾಯಬದ್ಧವಾಗಿ ಸೀಮಂತ ಕಾರ್ಯಕ್ರಮ ಮಾಡಲಾಗಿದೆ. ಹೊಸದುರ್ಗ ತಾಲೂಕಿನ ಕರ್ಪೂರದ ಕಟ್ಟೆ ಗ್ರಾಮದ ಮನೆಯಲ್ಲಿ ಈ ಕಾರ್ಯಕ್ರಮ ನಡೆದಿದೆ.
ಪ್ರೀತಿಯಿಂದ ಸಾಕಿದ 13 ತಿಂಗಳ ಶ್ವಾನಕ್ಕೆ ಮಾಲೀಕರು ಸಂಭ್ರಮದ ಸೀಮಂತ ಕಾರ್ಯ ಮಾಡಿದ್ದಾರೆ. ಕಾರ್ಯಕ್ರಮದ ವೇಳೆ ಶ್ವಾನ ಸುಮ್ಮನೆ ಕುಳಿತು ಎಲ್ಲ ಸೇವೆಗಳನ್ನೂ ಮಾಡಿಸಿಕೊಂಡಿದೆ. ಶ್ವಾನ ಸೀಮಂತ ಕಾರ್ಯಕ್ರಮದ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ.
ಅಜಯ್ ಹಾಗೂ ಸಹೋದರಿ ಜ್ಯೋತಿ ಎಂಬವರು ತಮ್ಮ ಎರಡು ತಿಂಗಳ ಗರ್ಭಿಣಿ ರೂಬಿಗೆ ಸೀಮಂತ ನೆರವೇರಿಸಿದರು. ನೆರೆಮನೆಯ ಮಹಿಳೆಯರೂ ಸೀಮಂತದಲ್ಲಿ ಪಾಲ್ಗೊಂಡಿದ್ದರು. ರೂಬಿಗೆ ಹೂ, ಹಣ್ಣು, ಅರಿಶಿಣ, ಕುಂಕುಮ ಇಟ್ಟು ಆರತಿ ಬೆಳಗಲಾಯಿತು. ಇಷ್ಟೇ ಅಲ್ಲ, ಕೇಕ್ ಕೂಡ ಕತ್ತರಿಸಿ ಎಲ್ಲರಿಗೂ ಸಿಹಿ ಹಂಚಲಾಯಿತು. ಈ ವೇಳೆ ಶ್ವಾನ ರೂಬಿ ಮದುಮಗಳಂತೆ ನಾಚಿ ಎಲ್ಲರನ್ನೂ ದಿಟ್ಟಿಸಿ ನೋಡುತ್ತಾ ಸಂಭ್ರಮಿಸಿದಳು.
ಇದನ್ನೂ ಓದಿ: ಬಳ್ಳಾರಿ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಾಯಗೊಂಡ ನವಿಲಿಗೆ ಚಿಕಿತ್ಸೆ ನೀಡಿದ ವೈದ್ಯರು