ಕೆಜೆಪಿ ಕಟ್ಟಿ ದೊಡ್ಡ ಅಪರಾಧ ಮಾಡಿದ್ದೆ.. ರಾಜ್ಯದ ಜನತೆ ಕ್ಷಮೆ ಕೇಳಿದ್ದೇನೆ : ಬಿ. ಎಸ್. ಯಡಿಯೂರಪ್ಪ - ಈಟಿವಿ ಭಾರತ ಕನ್ನಡ
🎬 Watch Now: Feature Video
ಹುಬ್ಬಳ್ಳಿ : ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ನಮ್ಮ ಪಕ್ಷಕ್ಕೆ ದ್ರೋಹ ಮಾಡಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅವರು ಮತ್ತೆ ಬಿಜೆಪಿ ಸೇರುವ ಬಗ್ಗೆ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರನ್ನು ಸೋಲಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆ. ನಂಬಿಕೆ ದ್ರೋಹ, ವಿಶ್ವಾಸ ದ್ರೋಹ ಮಾಡಿದವರನ್ನು ಜನ ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂಬ ವಿಶ್ವಾಸ ನನಗಿದೆ. ನಾವು ಶೆಟ್ಟರ್ ಅವರಿಗೆ ಯಾವುದೇ ಅನ್ಯಾಯ ಮಾಡಿರಲಿಲ್ಲ. ಎಲ್ಲಾ ಸ್ಥಾನಮಾನವನ್ನು ಕೊಟ್ಟಿದ್ದೆವು. ಆದರೂ ಪಕ್ಷಕ್ಕೆ ದ್ರೋಹ ಮಾಡಿ ಹೋಗಿದ್ದಾರೆ. ಅದಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದರು.
ಈ ಹಿಂದೆ ನಾನು ಬಿಜೆಪಿ ತೊರೆದು ಕೆಜಿಪಿ ಪಕ್ಷ ಕಟ್ಟಿ ದೊಡ್ಡ ಅಪರಾಧ ಮಾಡಿದ್ದೆ. ಈ ಬಗ್ಗೆ ರಾಜ್ಯದ ಜನತೆ ಹತ್ತಿರ ಕ್ಷಮೆಯನ್ನೂ ಕೇಳಿದ್ದೇನೆ. ನಾನು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ್ದೆ. ಆದರೆ ಶೆಟ್ಟರ್ ತರ ನಾನು ಕಾಂಗ್ರೆಸ್ ಸೇರ್ಪಡೆಯಾಗಿಲ್ಲ ಎಂದು ವಾಗ್ದಾಳಿ ನಡೆಸಿದ್ರು.
ಇದನ್ನೂ ಓದಿ : ನಗು ನಗುತ್ತಲೇ ಮುಖಾಮುಖಿಯಾದ ಸಿದ್ದರಾಮಯ್ಯ - ಬೊಮ್ಮಾಯಿ... ವಿಡಿಯೋ ನೋಡಿ