ರಾಮೋಜಿ ಫಿಲಂ ಸಿಟಿಯಲ್ಲಿ ಅಯೋಧ್ಯೆಯ ಶ್ರೀರಾಮನ ಪಾದುಕೆಗಳ ದರ್ಶನ
🎬 Watch Now: Feature Video
ಹೈದರಾಬಾದ್: ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ದೇವರ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ. ಜನವರಿ 22ರಂದು ನಡೆಯುವ ಮಹಾಮಸ್ತಕಾಭಿಷೇಕವನ್ನು ಇದೇ ರಾಷ್ಟ್ರ ಕಾತರದಿಂದ ಎದುರು ನೋಡುತ್ತಿದೆ. ಅಯೋಧ್ಯೆಯ ಟ್ರಸ್ಟ್ ಶ್ರೀರಾಮನಿಗೆ ವಿಶೇಷ ಪಾದುಕೆಗಳನ್ನು ತಯಾರಿಸಿದೆ. ಮಂಗಳವಾರ ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ಪಾದುಕೆಗಳ ದರ್ಶನದ ಅವಕಾಶ ಒದಗಿ ಬಂದಿತ್ತು.
13 ಕೆಜಿ ತೂಕದ ಈ ಪಾದುಕೆಗಳು ಐದು ಲೋಹಗಳಿಂದ ಮಾಡಲ್ಪಟ್ಟಿವೆ. ಇವುಗಳನ್ನು ತಯಾರಿಸುವ ಭಾಗ್ಯ ಹೈದರಾಬಾದ್‌ನ ಬೋಯಿನಪಲ್ಲಿಯ ಲೋಹದ ಕುಶಲಕರ್ಮಿ ಪಿಟ್ಟಂಪಲ್ಲಿ ರಾಮಲಿಂಗಾಚಾರಿ ಅವರಿಗೆ ಒಲಿದಿದೆ. ಇದೇ ತಿಂಗಳ 22ರಂದು ಅಯೋಧ್ಯೆಗೆ ಈ ಪಾದುಕೆಗಳು ತಲುಪಲಿವೆ. ಇದಕ್ಕೂ ಮುನ್ನ ದೈವತ್ವದ ಈ ಸಾಂಕೇತಿಕ ಪಾದಮುದ್ರೆಗಳನ್ನು ಪ್ರದರ್ಶಿಸಲಾಗುತ್ತಿದೆ.
ರಾಮೋಜಿ ಫಿಲಂ ಸಿಟಿಗೂ ಪಾದುಕೆಗಳನ್ನು ತರಲಾಗಿತ್ತು. ರಾಮೋಜಿ ಫಿಲಂ ಸಿಟಿ ಎಂಡಿ ವಿಜಯೇಶ್ವರಿ ಅವರು ಶ್ರೀರಾಮನ ಪಾದುಕೆಗಳನ್ನು ತಮ್ಮ ತಲೆಯ ಮೇಲೆ ಹೊತ್ತು ತಂದರು. ನಂತರ ಪೂಜೆ ಸಲ್ಲಿಸಲಾಯಿತು. ಈ ವೇಳೆ, ರಾಮೋಜಿ ಗ್ರೂಪ್‌ನ ಹಿರಿಯ ಅಧಿಕಾರಿಗಳು ಮತ್ತು ಉದ್ಯೋಗಿಗಳು ಸಾಲಾಗಿ ನಿಂತು ಶ್ರೀರಾಮನ ಪಾದುಕೆಗಳ ದರ್ಶನ ಪಡೆದರು.
ಇದನ್ನೂ ಓದಿ: ಜ. 22 ರಂದು ರಾಮ ಲಲ್ಲಾ ಪ್ರತಿಷ್ಠಾಪನೆ: ಅಂದು ಗುಂಡು ತಗುಲಿದ್ದ ಕರಸೇವಕನಿಗೆ ಆಮಂತ್ರಣ