ನೀಲಕಂಠ ಪರ್ವತದಲ್ಲಿ ಹಿಮಪಾತ.. ಹಿಮರಾಶಿಯ ದೃಶ್ಯ ಸೆರೆ
🎬 Watch Now: Feature Video
ಉತ್ತರಾಖಂಡ: ಬದರೀನಾಥ ಧಾಮ್ ಬಳಿಯ ಸತೋಪಂಥ್ನಲ್ಲಿರುವ ನೀಲಕಂಠ ಪರ್ವತದಲ್ಲಿ ಹಿಮಪಾತ ಸಂಭವಿಸಿದೆ. ಸತೋಪಂಥ್ ಟ್ರೆಕ್ಗೆ ತೆರಳಿದ್ದ ಜನರು ಹಿಮರಾಶಿಯ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಹಿಮಪಾತದಿಂದ ಯಾವುದೇ ಪ್ರಾಣ ಹಾನಿ ಉಂಟಾಗಿಲ್ಲ ಎಂದು ವರದಿ ಆಗಿದೆ.
ಸತೋಪಂಥ್ ತಾಲ್ ಎಂಬ ಪ್ರದೇಶ ಚಮೋಲಿ ಜಿಲ್ಲೆಯ ಒಂದು ಸುಂದರವಾದ ಸ್ಥಳವಾಗಿದ್ದು, ಸಾಕಷ್ಟು ಹಿಮನದಿಗಳಿಂದ ಕೂಡಿದೆ. ಸತೋಪಂಥ್ ಭಾರತದ ಮೊದಲ ಗ್ರಾಮವಾದ 'ಮನ' ದಿಂದ ಸುಮಾರು 22 ಕಿಲೋಮೀಟರ್ ದೂರದಲ್ಲಿದೆ. ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಾರಣಿಗರು ಮತ್ತು ಪ್ರವಾಸಿಗರು ಆಗಮಿಸುತ್ತಾರೆ. ಇತ್ತೀಚೆಗಷ್ಟೇ ಹವಾಮಾನ ಇಲಾಖೆ ಹಿಮಪಾತದ ಬಗ್ಗೆ ಮುನ್ಸೂಚನೆ ನೀಡಿತ್ತು.
ಯಾತ್ರಾರ್ಥಿ ನೊಂದಣಿ ನಿಷೇಧ : ಹವಾಮಾನ ವೈಪರೀತ್ಯದಿಂದಾಗಿ ಕೇದಾರನಾಥ ಯಾತ್ರೆಗೆ ಈ ಹಿಂದೆ ಮೇ 15 ರವರೆಗೆ ಹೊಸ ನೋಂದಣಿಯನ್ನು ನಿಷೇಧಿಸಲಾಗಿತ್ತು. ಇದೀಗ ಮೇ 25ರ ವರೆಗೆ ಇದ ಮುಂದೂಡಲಾಗಿದೆ. ಮೇ 26 ರಿಂದ ಮತ್ತೆ ಹೊಸ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ.
ಇದನ್ನೂ ಓದಿ : ಚಾರ್ಧಾಮ್ ಯಾತ್ರೆ 2023: ಉಖಿಮಠದಿಂದ ಕೇದಾರನಾಥ ದೇವಸ್ಥಾನಕ್ಕೆ ಡೋಲಿ ಯಾತ್ರೆ