ಬಾರ್ನಲ್ಲಿ ಆವಾಜ್ ಹಾಕಿದಕ್ಕೆ ನಡುರಸ್ತೆ ಲಾಂಗ್ ಹಿಡಿದು ಹಲ್ಲೆ : ಆರು ಮಂದಿ ಅರೆಸ್ಟ್
🎬 Watch Now: Feature Video
ಬೆಂಗಳೂರು : ಕ್ಷುಲ್ಲಕ ಕಾರಣಕ್ಕೆ ಬಾರ್ನಲ್ಲಿ ಗಲಾಟೆ ಮಾಡಿ, ಬಳಿಕ ಯುವಕ ಮೇಲೆ ನಡುರಸ್ತೆಯಲ್ಲೇ ತಲವಾರ್ ದಾಳಿ ನಡೆಸಿದ ಆರು ಮಂದಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಲ್ಲೆಗೊಳಗಾದ ರೋಹಿತ್ ಗೌಡ ನೀಡಿದ ದೂರಿನ ಮೇರೆಗೆ ಪೊಲೀಸರು ರಾಜು, ಧನುಷ್, ಗುರುಪ್ರಸಾದ್, ಪವನ್, ಕಿರಣ್ ಹಾಗೂ ನವೀನ್ ಎಂಬುವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಹಾಗೂ ಗಾಯಾಳು ರೋಹಿತ್ ಗೌಡ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯ ಕಾವೇರಿಪುರ ಹಾಗೂ ವೃಷಭಾವತಿ ನಗರದ ನಿವಾಸಿಗಳಾಗಿದ್ದಾರೆ.
ಹಲ್ಲೆಗೊಳಗಾದ ರೋಹಿತ್, ಕಳೆದ ಆಗಸ್ಟ್ 31ರಂದು ನವ್ಯಶ್ರೀ ಬಾರ್ನಲ್ಲಿ ಕುಡಿಯಲು ತೆರಳಿದ್ದ. ಈ ವೇಳೆ, ಆರೋಪಿಗಳ ಗ್ಯಾಂಗ್ ಅದೇ ಬಾರ್ನಲ್ಲಿ ಇತ್ತು. ಈ ವೇಳೆ ರೋಹಿತ್ ಕ್ಷುಲ್ಲಕ ಕಾರಣಕ್ಕಾಗಿ ಗ್ಯಾಂಗ್ಗೆ ಆವಾಜ್ ಹಾಕಿದ್ದನಂತೆ. ಇದೇ ದ್ವೇಷದ ಹಿನ್ನೆಲೆ ಸೆ.1ರಂದು ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ನಡೆದುಕೊಂಡು ಹೋಗುತ್ತಿದ್ದ ರೋಹಿತ್ ತಲವಾರು ದಾಳಿ ನಡೆಸಿದ್ದಾರೆ. ಹಲ್ಲೆಯಿಂದ ರೋಹಿತ್ನ ಬೆನ್ನುಮೂಳೆ ಮುರಿದಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಹಲ್ಲೆ ದೃಶ್ಯ ಇಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಇದನ್ನೂ ಓದಿ : ರಿವಾರ್ಡ್ ವೆಬ್ಸೈಟ್ಗೆ ಕನ್ನ ಹಾಕಿದ್ದ ಚಾಲಾಕಿ: ಆಂಧ್ರ ಮೂಲದ ಆರೋಪಿ ಅರೆಸ್ಟ್, 4 ಕೋಟಿಗೂ ಹೆಚ್ಚು ಮೌಲ್ಯದ ವಸ್ತುಗಳು ವಶಕ್ಕೆ