ಏಷ್ಯನ್ ಗೇಮ್ಸ್: ಭಾರತಕ್ಕೆ ಹಿಂದಿರುಗಿದ ಚಿನ್ನದ ಪದಕ ವಿಜೇತೆ ಸ್ಮೃತಿ ಮಂಧಾನಗೆ ಅದ್ಧೂರಿ ಸ್ವಾಗತ - ಮುಂಬೈ ವಿಮಾನ ನಿಲ್ದಾಣ
🎬 Watch Now: Feature Video
Published : Sep 27, 2023, 4:06 PM IST
|Updated : Sep 27, 2023, 4:14 PM IST
ಮುಂಬೈ (ಮಹಾರಾಷ್ಟ್ರ): ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಭಾರತಕ್ಕೆ ಹಿಂತಿರುಗಿದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಅವರನ್ನು ಬುಧವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಚೀನಾದಿಂದ ಮುಂಬೈಗೆ ಬಂದಿಳಿದ ಚಿನ್ನದ ಪದಕ ವಿಜೇತೆಯನ್ನು ಸ್ವಾಗತಿಸಲು ಅನೇಕ ಅಭಿಮಾನಿಗಳು ಹಾಗೂ ಕುಟುಂಬದ ಸದಸ್ಯರು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದರು.
ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದ ಜನ ಸ್ಮೃತಿ ಮಂಧಾನ ಅವರಲ್ಲಿ ಮತ್ತೊಮ್ಮೆ ಭಾರತದ ಗೆಲುವನ್ನು ಸಂಭ್ರಮಿಸಿದರು. ಮಂಧಾನ ಅವರ ಜೊತೆ ಇತರ ಕೆಲವು ಆಟಗಾರ್ತಿಯರು ಕೂಡ ಇದ್ದು, ಅವರನ್ನೂ ಆತ್ಮೀಯವಾಗಿ ಸ್ವಾಗತಿಸಲಾಯಿತು.
ಏಷ್ಯನ್ ಗೇಮ್ಸ್ನಲ್ಲಿ ಸೋಮವಾರ ನಡೆದ ಅಂತಿಮ ಪಂದ್ಯದಲ್ಲಿ ಭಾರತದ ಮಹಿಳಾ ಕ್ರಿಕೆಟ್ ತಂಡ ಶ್ರೀಲಂಕಾವನ್ನು 19 ರನ್ಗಳಿಂದ ಸೋಲಿಸಿತ್ತು. ಟೈಟಾಸ್ ಸಂಧು, ದೀಪ್ತಿ ಶರ್ಮಾ ಹಾಗೂ ದೇವಿಕಾ ವೈದ್ಯ ಅವರ ಅದ್ಭುತ ಬೌಲಿಂಗ್ನಿಂದ ಭಾರತ ತಂಡ 117 ರನ್ಗಳನ್ನು ಗಳಿಸಿ, ಚಿನ್ನದ ಪದಕ ಮುಡಿಗೇರಿಸಿಕೊಂಡಿತ್ತು.
ಇದನ್ನೂ ನೋಡಿ : ‘ಮಂಧಾನ ದೇವತೆ’, ಅವರ ಬ್ಯಾಟಿಂಗ್ ನೋಡುವುದು ಚೆಂದ- ಚೀನಾ ಅಭಿಮಾನಿ