ಶಂಕಿತ ಉಗ್ರರಿಂದ ಪೆಟ್ರೋಲ್ ಪಂಪ್ ಉದ್ಯೋಗಿ ಅಪಹರಣ: ಜಿಪಂ ಸದಸ್ಯನ ಕಾರು ಚಾಲಕನಿಗೆ ಗುಂಡಿಕ್ಕಿ ಹತ್ಯೆಗೆ ಯತ್ನ - ಬಿಜೆಪಿ ಜಿಪಂ ಸದಸ್ಯ
🎬 Watch Now: Feature Video
ತಿನ್ಸುಕಿಯಾ(ಅಸ್ಸೋಂ):ಅರುಣಾಚಲ ಪ್ರದೇಶ ರಾಜ್ಯದ ನಮ್ಸಾಯಿ ಜಿಲ್ಲೆಯ ಚೌಕಂನಲ್ಲಿರುವ ಬಿಜೆಪಿ ಜಿಪಂ ಸದಸ್ಯ ಜೆನಿಯಾ ನಾಮ್‌ಚೂಮ್ ಅವರ ಒಡೆತನದ ಪೆಟ್ರೋಲ್ ಪಂಪ್‌ನಲ್ಲಿ ಬುಧವಾರ ರಾತ್ರಿ ಅಪಹರಣ ಘಟನೆ ನಡೆದಿದೆ.
ಮೂರು ಶಸ್ತ್ರಸಜ್ಜಿತ ವ್ಯಕ್ತಿಗಳಿರುವ ಗುಂಪು ಪೆಟ್ರೋಲ್ ಪಂಪ್‌ನ ಕ್ಯಾಷಿಯರ್ನನ್ನು ಅಪಹರಿಸಿದೆ. ಅಪಹರಣಗೊಂಡ ಕ್ಯಾಷಿಯರ್ ಬಿಹಾರದ ನಿವಾಸಿ ದಿನೇಶ್ ಶರ್ಮಾ ಎನ್ನಲಾಗಿದ್ದು, ಈ ವೇಳೆ ಅಪಹರಣಕಾರರು ಪೆಟ್ರೋಲ್ ಪಂಪ್‌ನ ಇನ್ನೊಬ್ಬ ಉದ್ಯೋಗಿ ಮೇಲೆ ಗುಂಡು ಹಾರಿಸಿದ್ದಾರೆ.
ಗುಂಡು ತಾಗಿದ ನೌಕರನು ಮಿಠಾಯಿ ಮರಾಂಡಿ (28)ಗುರುತಿಸಲಾಗಿದ್ದು, ಆತನು ಜಿಪಂ ಸದಸ್ಯೆ ಜೆನಿಯಾ ನಾಮ್‌ಚೂಮ್ ಅವರ ಕಾರಿನ ಚಾಲಕನಾಗಿದ್ದನು. ತೀವ್ರವಾಗಿ ಗಾಯಗೊಂಡಿದ್ದ ಮಿಠಾಯಿ ಮರಾಂಡಿಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ಆತನ ಸ್ಥಿತಿ ಚಿಂತಾಜನಕವಾಗಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ ಶಸ್ತ್ರಸಜ್ಜಿತ ಅಪಹರಣಕಾರರು ಕಾಲ್ನಡಿಗೆಯಲ್ಲಿ ಬರುತ್ತಿದ್ದರು. ಉಗ್ರಗಾಮಿ ಸಂಘಟನೆಗೆ ಸೇರಿದವರು ಎಂದು ಶಂಕಿಸಲಾಗಿದೆ. ಅವರು ಬುಲೆಟ್ ಪ್ರೂಫ್ ಜಾಕೆಟ್ ಧರಿಸಿ ಎಕೆ 47 ಹಿಡಿದಿದ್ದರು. ಸ್ಥಳೀಯ ಪೊಲೀಸರು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಶಂಕಿತ ಉಗ್ರರ ಪತ್ತೆಗೆ ಜಾಲಬೀಸಿದ್ದಾರೆ.
ಇದನ್ನೂಓದಿ:ಬೆಂಗಳೂರು: ಕುಡಿಯಲು ಹಣ ನೀಡದ ತಂದೆಯನ್ನೇ ಹತ್ಯೆ ಮಾಡಿದ್ದ ಮಗ ಅರೆಸ್ಟ್