ರಂಗನತಿಟ್ಟು ಪಕ್ಷಿಧಾಮದಲ್ಲಿ ವಿದೇಶಿ ಪಕ್ಷಿಗಳ ಕಲರವ: ವಿಡಿಯೋ
🎬 Watch Now: Feature Video
ಮೈಸೂರು/ಮಂಡ್ಯ: ಇಲ್ಲಿನ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮಕ್ಕೆ ಚಳಿಗಾಲದ ಹಿನ್ನೆಲೆ ತಮ್ಮ ವಂಶಾಭಿವೃದ್ಧಿಗಾಗಿ ವಿದೇಶಗಳಿಂದ ನಾನಾ ಪಕ್ಷಿಗಳು ಆಗಮಿಸುತ್ತಿದ್ದು, ಅವುಗಳನ್ನು ನೋಡಲು ಪ್ರವಾಸಿಗರ ದಂಡೇ ಇಲ್ಲಿಗೆ ಲಗ್ಗೆ ಇಡುತ್ತಿದೆ. ಗುಂಪು ಗುಂಪಾಗಿ ಆಗಮಿಸುತ್ತಿರುವ ಪ್ರವಾಸಿಗರು, ಪಕ್ಷಿಗಳ ಕಲರವ ಹಾಗೂ ಪ್ರಕೃತಿ ಸೌಂದರ್ಯ ಕಂಡು ಮೂಕವಿಸ್ಮಿತರಾಗುತ್ತಿದ್ದಾರೆ. ಮಂಡ್ಯ ಜಿಲ್ಲೆಯ ಕೆಆರ್ಎಸ್ ಜಲಾಶಯದ ಬಳಿ ಇರುವ ರಂಗನತಿಟ್ಟು ಪಕ್ಷಿಧಾಮ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿ. ಚಳಿಗಾಲ ಆರಂಭವಾದ ಹಿನ್ನೆಲೆ ತಮ್ಮ ವಂಶಾಭಿವೃದ್ಧಿಗಾಗಿ ದೇಶ ವಿದೇಶಗಳಿಂದ ಸಾವಿರಾರು ಸಂಖ್ಯೆಯ ಪಕ್ಷಿಗಳು ಇಲ್ಲಿಗೆ ಬರುತ್ತವೆ.
ನವಂಬರ್ ಮತ್ತು ಡಿಸೆಂಬರ್ ಮಾಸ ಬಂತೆಂದರೆ ಸಾಕು ಸ್ಪೂನ್ ಬಿಲ್, ರಿವರ್ ಟಂಗ್, ಪೆಲಿಕಾನ್, ವೈಟ್ ಐಬಿಸ್, ಕಮೋರೆಂಟ್ ಸೇರಿದಂತೆ ಹಲವು ಪಕ್ಷಿಗಳು ಇಲ್ಲಿಗೆ ಆಗಮಿಸುತ್ತವೆ. ಪ್ರತಿ ಚಳಿಗಾಲದಂತೆ ಈ ಬಾರಿಯೂ ಆಗಮಿಸುತ್ತಿವೆ. ಆ ಪಕ್ಷಿಗಳ ಹಾಗೂ ಪ್ರಕೃತಿ ಸೌಂದರ್ಯ ಸವಿಯುವುದೇ ರೋಮಾಂಚನ. ಈ ನಿಟ್ಟಿನಲ್ಲಿ ಪ್ರವಾಸಿಗರು ರಂಗನತಿಟ್ಟು ಪಕ್ಷಿಧಾಮಕ್ಕೆ ಆಗಮಿಸಿ, ಬೋಟಿಂಗ್ ಮೂಲಕ ಅವುಗಳ ಕಲರವವನ್ನು ಕಣ್ತುಂಬಿಕೊಳ್ಳುತ್ತಾರೆ.
ರಂಗನತಿಟ್ಟು ಸ್ವಾಭಾವಿಕವಾಗಿರುವ ಪಕ್ಷಿಧಾಮ. ದೇಶದ ಪ್ರತಿಷ್ಠಿತ ಪಕ್ಷಿಧಾಮಗಳಲ್ಲಿ ಒಂದು. ಈ ತಿಂಗಳಲ್ಲಿ ಪಕ್ಷಿಗಳು ಸಾಗರ, ಸಮುದ್ರ ಮತ್ತು ಹಿಮಾಚ್ಛಾದಿತ ಬೆಟ್ಟಗಳನ್ನು ದಾಟಿ ಇಲ್ಲಿಗೆ ಆಗಮಿಸುತ್ತವೆ. ಎರಡು ತಿಂಗಳಿಗೂ ಹೆಚ್ಚು ಕಾಲ ಇದ್ದು ವಂಶಾಭಿವೃದ್ಧಿ ಮಾಡಿಕೊಂಡು, ಪುನಃ ತಮ್ಮ ದೇಶಗಳಿಗೆ ಮರಳುತ್ತವೆ.
ಇದನ್ನೂ ಓದಿ: Flamingo Birds: ಬಿಸಿಲೂರು ರಾಯಚೂರಲ್ಲಿ ಫ್ಲೆಮಿಂಗೋ ಕಲರವ: ಸಂತಾನೋತ್ಪತ್ತಿ ಬಳಿಕವೂ ಹಿಂತಿರುಗದ ವಿದೇಶಿ ಪಕ್ಷಿಗಳು!