₹245 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ; ಐವರು ಇರಾನ್ ಪ್ರಜೆಗಳ ಬಂಧನ - Etv Bharat Kannada
🎬 Watch Now: Feature Video

ಓಖಾ (ಗುಜರಾತ್): ಸಮುದ್ರ ಮಾರ್ಗವಾಗಿ ಅಪಾರ ಪ್ರಮಾಣದ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಐವರು ಇರಾನಿ ಪ್ರಜೆಗಳನ್ನು ಇಲ್ಲಿಯ ಓಖಾ ಕರಾವಳಿಯಲ್ಲಿ ಆ್ಯಂಟಿ ಟೆರರ್ ಸ್ಕ್ವಾಡ್ (ಎಟಿಎಸ್) ಮತ್ತು ಇಂಡಿಯನ್ ಕೋಸ್ಟ್ಗಾರ್ಡ್ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಬಂಧಿತರಿಂದ 425 ಕೋಟಿ ರೂ ಮೌಲ್ಯದ 62 ಕೆಜಿ ಮಾದಕವಸ್ತುಗಳು ಮತ್ತು ಹಡಗನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳನ್ನು ವಿಚಾರಣೆಗಾಗಿ ಓಖಾ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದ್ದು, ತನಿಖೆ ನಡೆಯುತ್ತಿದೆ. ಸಮುದ್ರ ಮಾರ್ಗವಾಗಿ ಮಾದಕವಸ್ತುಗಳ ಅಕ್ರಮ ಸಾಗಾಟ ನಡೆಯುತ್ತಿರುವ ಬಗ್ಗೆ ಇಂಡಿಯನ್ ಕೋಸ್ಟ್ ಗಾರ್ಡ್ಗೆ ನಿಖರ ಮಾಹಿತಿ ಲಭ್ಯವಾಗಿತ್ತು. ಕಳೆದ 18 ತಿಂಗಳಿಂದ ಕರಾವಳಿ ಕಾವಲು ಪಡೆ ಮತ್ತು ಎಟಿಎಸ್ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದು ಈವರೆಗೆ ಒಟ್ಟು 407 ಕೆ.ಜಿ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಇದರ ಒಟ್ಟು ಮಾರುಕಟ್ಟೆ ಮೌಲ್ಯ 2,355 ಕೋಟಿ ರೂಪಾಯಿ ಎಂದು ತಿಳಿದುಬಂದಿದೆ. ಇತ್ತೀಚೆಗೆ ಸಮುದ್ರ ಮಾರ್ಗವಾಗಿ ಮಾದಕ ವಸ್ತುಗಳ ಕಳ್ಳಸಾಗಣೆ ಪ್ರಕರಣಗಳು ಹೆಚ್ಚುತ್ತಿದ್ದು, ಭದ್ರತಾ ಪಡೆಗಳು ವಿಶೇಷ ಮುತುವರ್ಜಿ ವಹಿಸುತ್ತಿವೆ.
ಇದನ್ನೂ ಓದಿ: ಚೆನ್ನೈನಲ್ಲಿ ಡ್ರಗ್ಸ್ ಪೆಡ್ಲರ್ ಮಹಿಳೆಯ ಹಿಡಿದುಕೊಟ್ಟ ಪೊಲೀಸ್ ಶ್ವಾನ