ಬಿಎಂಟಿಸಿ ಬಸ್ ಹರಿದು ವೃದ್ಧನ ಎರಡೂ ಕಾಲುಗಳು ಕಟ್ - Etv Bharat Kannada
🎬 Watch Now: Feature Video
ಬೆಂಗಳೂರು: ಬಿಎಂಟಿಸಿ ಬಸ್ ಹರಿದ ಪರಿಣಾಮ ವೃದ್ಧನ ಎರಡೂ ಕಾಲುಗಳು ತುಂಡಾದ ಘಟನೆ ತಡರಾತ್ರಿ ಯಶವಂತಪುರ ಸರ್ಕಲ್ನಲ್ಲಿ ನಡೆದಿದೆ. ರಸ್ತೆ ದಾಟಲು ನಿಂತಿದ್ದ ಸುಮಾರು 60 ವರ್ಷ ವಯಸ್ಸಿನ ವ್ಯಕ್ತಿಯ ಕಾಲುಗಳ ಮೇಲೆ ಬಿಎಂಟಿಸಿ ಬಸ್ನ ಹಿಂಬದಿ ಚಕ್ರಗಳು ಹರಿದಿವೆ. ಪರಿಣಾಮ ಎರಡು ಕಾಲುಗಳು ತುಂಡಾಗಿದ್ದು ಚಿಕಿತ್ಸೆಗಾಗಿ ಕೆ.ಸಿ ಜನರಲ್ ಆಸ್ಪತ್ರೆಗೆ ರವಾನಿಸಲಾಗಿದೆ.
ಮತ್ತೊಂದು ಘಟನೆಯಲ್ಲಿ ಬೊಲೆರೋ ವಾಹನಕ್ಕೆ ವಾಟರ್ ಟ್ಯಾಂಕರ್ ಡಿಕ್ಕಿಯಾದ ಪರಿಣಾಮ ಬೊಲೆರೋದಲ್ಲಿದ್ದ ಹೋಟೆಲ್ ತ್ಯಾಜ್ಯ ರಸ್ತೆ ಮೇಲೆ ಬಿದ್ದು ಜಾರುವ ಸ್ಥಿತಿ ನಿರ್ಮಾಣವಾದ ಘಟನೆ ಬೆಳ್ಳಂ ಬೆಳಗ್ಗೆ ರಾಜಾಜಿನಗರದಲ್ಲಿ ನಡೆದಿದೆ. ಇಸ್ಕಾನ್ ದೇವಸ್ಥಾನದ ಮುಂದಿನ ರಸ್ತೆಯಲ್ಲಿ ಘಟನೆ ನಡೆದಿದ್ದು ಅಪಘಾತದಿಂದಾಗಿ ಬೊಲೇರೋದಲ್ಲಿದ್ದ ಹೋಟೆಲ್ ತ್ಯಾಜ್ಯ ಸಂಪೂರ್ಣವಾಗಿ ರಸ್ತೆಯ ಮೇಲೆ ಬಿದ್ದಿದೆ. ಇದರಿಂದಾಗಿ ಕೆಲ ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಬಳಿಕ ಸ್ಥಳೀಯರು ರಸ್ತೆಯ ಮೇಲೆ ಡಸ್ಟ್ ಪೌಡರ್ ಹಾಕಿ ದ್ವಿಚಕ್ರ ವಾಹನ ಸವಾರರಿಗೆ ಸಂಚರಿಸಲು ಅನುವು ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ: ಮಕ್ಕಳ ಕಳ್ಳರು ಎಂಬ ತಪ್ಪು ಕಲ್ಪನೆ.. ಯುವಕರಿಗೆ ಥಳಿಸಿ ಕಾರಿಗೆ ಬೆಂಕಿ ಹಚ್ಚಿದ ಗ್ರಾಮಸ್ಥರು