75ರ ವರ, 70ರ ವಧು.. ವೃದ್ಧಾಶ್ರಮದಲ್ಲಿ ಚಿಗುರೊಡೆದ ಪ್ರೀತಿಗೆ ಮದುವೆಯ ಮುದ್ರೆ.. - ಇಳಿ ವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-17856787-thumbnail-4x3-ck.jpg)
ಕೊಲ್ಲಾಪುರ(ಮಹಾರಾಷ್ಟ್ರ): ಪ್ರೀತಿ ಎಂಬುದು ಯಾರಿಗಾದರೂ, ಯಾವಾಗ ಬೇಕಾದರೂ ಮತ್ತು ಎಲ್ಲಿ ಬೇಕಾದರೂ ಹುಟ್ಟಿಕೊಳ್ಳಬಹುದು ಎಂಬುದಕ್ಕೆ ಕೊಲ್ಲಾಪುರದಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಇಲ್ಲಿನ ಶಿರೋಳ ತಾಲೂಕಿನ 75 ವರ್ಷದ ವೃದ್ಧ 70 ವರ್ಷದ ವೃದ್ಧೆಯನ್ನು ವಿವಾಹವಾಗುವ ಮೂಲಕ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದಾರೆ. ಅನುಸೂಯ ಶಿಂಧೆ ಮತ್ತು ಬಾಬುರಾವ್ ಪಾಟೀಲ್ ವೃದ್ಧಾಶ್ರಮದಲ್ಲಿ ಮದುವೆಯಾದ ಜೋಡಿ.
ಇವರು ಕಳೆದ ಎರಡು ವರ್ಷಗಳಿಂದ ಶಿರೋಳ ತಾಲೂಕಿನ ಘೋಸರವಾಡದಲ್ಲಿರುವ ಜಾನಕಿ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದಾರೆ. ಇಬ್ಬರೂ ಒಬ್ಬರನ್ನೊಬ್ಬರು ಭೇಟಿಯಾಗಿ, ಪರಿಚಯ ಮಾಡಿಕೊಂಡು ಈ ವಯಸ್ಸಿನಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ. ಇದಕ್ಕೆ ವೃದ್ಧಾಶ್ರಮ ನಡೆಸುತ್ತಿರುವ ಬಾಬಾಸಾಹೇಬ ಪೂಜಾರಿ ಅವರು ಕಾನೂನು ಸಲಹೆಯನ್ನು ಪಡೆದು, ಗ್ರಾಮಸ್ಥರು ಹಾಗೂ ಪ್ರಮುಖರ ಸಮ್ಮುಖದಲ್ಲಿ ವೃದ್ಧಾಶ್ರಮದಲ್ಲೇ ವಿವಾಹ ನೆರವೇರಿಸುವ ಮೂಲಕ ವೃದ್ಧರ ಆಸೆಯನ್ನು ಈಡೇರಿಸಿದ್ದಾರೆ.
ಇದನ್ನೂ ಓದಿ:ನಾಮಕರಣ ಶುಭ ಸಮಾರಂಭದಲ್ಲಿ ಗ್ಯಾಸ್ ಬಲೂನ್ ಸ್ಫೋಟ