ಶಿವಮೊಗ್ಗ: ಬಿಜೆಪಿ ಅಭ್ಯರ್ಥಿ ಪರ ಅದ್ದೂರಿ ರೋಡ್ ಶೋ ನಡೆಸಿದ ಅಮಿತ್ ಶಾ - amith show road show
🎬 Watch Now: Feature Video
ಶಿವಮೊಗ್ಗ: ಚುನಾವಣಾ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಇದರ ನಡುವೆ ಶಿವಮೊಗ್ಗದಲ್ಲಿ ಮೂರು ಪಕ್ಷದ ಅಭ್ಯರ್ಥಿಗಳ ನಡುವೆ ನೇರಾ ನೇರ ಸ್ಪರ್ಧೆ ಏರ್ಪಟ್ಟಿದೆ. ಹೀಗಾಗಿ ಸೋಮವಾರ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಪರ ಮತಯಾಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಶಿವಮೊಗ್ಗ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಅದ್ಧೂರಿ ರೋಡ್ ಶೋ ನಡೆಯಿತು.
ನಗರದದಿಂದ ಪ್ರಾರಂಭವಾದ ರೋಡ್ ಶೋ ಅಮೀರ್ ಅಹಮದ್ ಸರ್ಕಲ್, ನೆಹರು ರೋಡ್, ಗೋಪಿ ವೃತ್ತ, ದುರ್ಗಿಗುಡಿ, ಜೈಲು ರಸ್ತೆ ಮೂಲಕ ಲಕ್ಷ್ಮೀ ಟಾಕೀಸ್ವರೆಗೂ ಅದ್ದೂರಿಯಾಗಿ ರೋಡ್ ಶೋ ನಡೆಯಿತು ಈ ವೇಳೆ ಸಾವಿರಾರು ಜನ ಭಾಗವಹಿಸಿದರು. ರೋಡ್ ಶೋ ಉದ್ದಕ್ಕೂ ಹತ್ತಾರು ಕಲಾ ತಂಡಗಳು, ಜಾನಪದ ನೃತ್ಯ ಮಾಡುವ ಮೂಲಕ ಗಮನ ಸೆಳೆದವು. ಇನ್ನು ಯುವಕರು ಬಿಜೆಪಿ ಪ್ರಚಾರದ ಹಾಡಿಗೆ ಕುಣಿದು ಕುಪ್ಪಳಿಸಿದರು. ಒಟ್ಟಾರೆ ಸೋಮವಾರ ಶಿವಮೊಗ್ಗ ನಗರದಲ್ಲಿ ಅಮಿತ್ ಶಾ ರೋಡ್ ಶೋ ಅದ್ಧೂರಿಯಾಗಿ ಜರುಗಿತು.
ಇದನ್ನೂ ಓದಿ: ಸಂಬಲ್ಪುರದಲ್ಲಿ ಪಾಳುಬಾವಿಗೆ ಬಿದ್ದ ಮರಿ ಆನೆ ರಕ್ಷಣೆ.. ವಿಡಿಯೋ