ಆರ್‌ಆರ್‌ಆರ್ ಖ್ಯಾತಿಯ ನಟ ರಾಮ್ ಚರಣ್,ಚಿರಂಜೀವಿ ಭೇಟಿ ಮಾಡಿದ ಅಮಿತ್ ಶಾ - Best Original Song
🎬 Watch Now: Feature Video
ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿಯಲ್ಲಿ RRR ಖ್ಯಾತಿಯ ನಟ ರಾಮ್ ಚರಣ್ ಮತ್ತು ಅವರ ತಂದೆ ಚಿರಂಜೀವಿ ಅವರನ್ನು ಭೇಟಿಯಾದರು. 'ನಾಟು ನಾಟು' ಸಾಂಗ್ಗೆ ಆಸ್ಕರ್ ಪ್ರಶಸ್ತಿ ಸಿಕ್ಕಿರುವುದರಿಂದ ಗೃಹ ಸಚಿವರು ಅವರನ್ನು ಅಭಿನಂದಿಸಿದರು.
ಇನ್ನೊಂದೆಡೆ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ (ಮಾರ್ಚ್,13) ರಂದು ನಡೆದ 95ನೇ ಅಕಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಭಾರತದ ಖ್ಯಾತ ಚಲನಚಿತ್ರ ನಿರ್ದೇಶಕ ಎಸ್ ಎಸ್ ರಾಜಮೌಳಿ ಅವರ 'ಆರ್‌ಆರ್‌ಆರ್' ತೆಲುಗು ಸಿನಿಮಾದ ಜನಪ್ರಿಯ 'ನಾಟು ನಾಟು' ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿದೆ. ಈ ಮೂಲಕ ಎರಡು ದಶಕಗಳ ಬಳಿಕ ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡು 'ಬೆಸ್ಟ್ ಒರಿಜಿನಲ್ ಸಾಂಗ್’ ವಿಭಾಗದಲ್ಲಿ ಆಸ್ಕರ್ ಪಡೆದ ಮೊದಲ ಭಾರತೀಯ ಗೀತೆಯಾಗಿ ಹೊರಹೊಮ್ಮಿತ್ತು.
ಎಂ.ಎಂ.ಕೀರವಾಣಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದ ಈ ಗೀತೆ, ವಿಶ್ವಮಟ್ಟದಲ್ಲೇ ಪ್ರಖ್ಯಾತಿ ಗಳಿಸಿದೆ. ಜಾಗತಿಕ ಗುಣಮಟ್ಟದ ಇಂಗ್ಲಿಷ್ ಹಾಡುಗಳನ್ನೂ ಹಿಂದಿಕ್ಕಿ ನಾಟು ನಾಟು ಪ್ರತಿಷ್ಟಿತ ಪ್ರಶಸ್ತಿ ಬಾಚಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದಿದೆ. ಕಾರ್ಯಕ್ರಮದಲ್ಲಿ ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ ಮತ್ತು ಗೀತೆ ರಚನೆಕಾರ ಚಂದ್ರಬೋಸ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಪ್ರಶಸ್ತಿಗೆ ರೇಸ್‌ನಲ್ಲಿದ್ದ ಗೀತೆಗಳು: ಈ ವರ್ಷದ ಅಕಾಡೆಮಿ ಪ್ರಶಸ್ತಿಗೆ ಭಾರತದ 'ನಾಟು ನಾಟು' ಹಾಡು ಮತ್ತು ಲಿಫ್ಟ್ ಮಿ ಅಪ್ , ದಿಸ್ ಈಸ್ ಲೈಫ್, ಹೋಲ್ಡ್ ಮೈ ಹ್ಯಾಂಡ್, ಅಪ್ಲೌಸ್ ಹಾಡುಗಳು ನಾಮನಿರ್ದೇಶನಗೊಂಡಿದ್ದವು. ಆದ್ರೆ, ಎಲ್ಲವನ್ನೂ ಹಿಂದಿಕ್ಕಿ ಆರ್‌ಆರ್‌ಆರ್ ಸಿನಿಮಾದ ಹಾಡು ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.
ಇದನ್ನೂ ಓದಿ : RRR ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಗರಿ!