ನಿಂತುಕೊಂಡೇ ಸುಖ ನಿದ್ರೆ ಮಾಡುವ ಅಂಬಾರಿ ಕ್ಯಾಪ್ಟನ್ ಅಭಿಮನ್ಯು : ವಿಡಿಯೋ
🎬 Watch Now: Feature Video
ಮೈಸೂರು : ಅರಮನೆಯ ಕೋಡಿ ಸೋಮೇಶ್ವರ ದೇವಾಲಯದ ಮುಂಭಾಗದಲ್ಲಿರುವ ಶೆಡ್ನಲ್ಲಿ ವಾಸ್ತವ್ಯ ಹೂಡಿರುವ, ಚಿನ್ನದ ಅಂಬಾರಿ ಹೊರುವ ಅಭಿಮನ್ಯು, ನಿಂತುಕೊಂಡೇ ನಿದ್ದೆ ಮಾಡುವ ಮೂಲಕ ತಾಲೀಮಿನ ಸುಸ್ತಿನಿಂದ ರಿಲ್ಯಾಕ್ಸ್ ಮಾಡುತ್ತಿದೆ. ಅದರ ವಿಡಿಯೋ ಇಲ್ಲಿದೆ.
ಜಂಬೂಸವಾರಿಯಲ್ಲಿ ಭಾಗವಹಿಸಲು ಸೆಪ್ಟೆಂಬರ್ 5 ರಂದು ಅರಮನೆ ಪ್ರವೇಶ ಮಾಡಿರುವ ಅಭಿಮನ್ಯು ನೇತೃತ್ವದ 8 ಗಜಪಡೆ, ಅರಮನೆ ಮುಂಭಾಗದ ಕೋಡಿ ಸೋಮೇಶ್ವರ ದೇವಾಲಯದ ಆವರಣದಲ್ಲಿರುವ ಆನೆ ಶೆಡ್ಗಳಲ್ಲಿ ವಾಸ್ತವ್ಯ ಹೂಡಿವೆ. ಅದರಲ್ಲಿ ಈ ಬಾರಿಯೂ ಚಿನ್ನದ ಅಂಬಾರಿ ಹೊರುವ ಅಭಿಮನ್ಯು ಆನೆಗೆ ವಿಶೇಷವಾಗಿ ಪ್ರತ್ಯೇಕ ಶೆಡ್ ಅನ್ನು ಹಾಕಲಾಗಿದೆ. ಈ ಶೆಡ್ಗೆ ಸಿಸಿಟಿವಿ ಕಣ್ಗಾವಲನ್ನು ಸಹ ಇಡಲಾಗಿದೆ.
ಪ್ರತಿನಿತ್ಯ ಬೆಳಗ್ಗೆ 7 ಗಂಟೆಗೆ ಹಾಗೂ ಸಂಜೆ 6 ಗಂಟೆಗೆ ಅರಮನೆಯಿಂದ ತಾಲೀಮನ್ನು ಆರಂಭಿಸಿ, ಜಂಬೂಸವಾರಿ ಸಾಗುವ ರಾಜಮಾರ್ಗದಲ್ಲಿ 5 ಕಿಲೋ ಮೀಟರ್ ದೂರ ಇರುವ ಬನ್ನಿ ಮಂಟಪದವರೆಗೆ ತಾಲೀಮು ನಡೆಯುತ್ತೆ. ಪುನಃ ಅರಮನೆಗೆ ಆನೆಗಳು ವಾಪಸ್ ಆಗುತ್ತವೆ. ಅರಮನೆಯ ಶೆಡ್ನಲ್ಲಿ ಗಜಪಡೆಗೆ ತಯಾರಾಗಿರುವ ವಿಶೇಷ ಆಹಾರವನ್ನು ತಿಂದು, ಸ್ನಾನ ಮಾಡಿಸಿಕೊಂಡು, ಶೆಡ್ಗೆ ಬಂದು ಆಯಾಸವನ್ನು ನೀಗಿಸಿಕೊಳ್ಳುವ ಅಭಿಮನ್ಯು ಆನೆ, ಶೆಡ್ನಲ್ಲಿ ನಿಂತುಕೊಂಡೇ ನಿದ್ರೆ ಮಾಡುತ್ತದೆ. ಸುತ್ತಮುತ್ತ ಶಬ್ದವಾದರೆ ಒಂದು ಕಣ್ಣನ್ನು ತೆರೆದು ನೋಡಿ, ಪುನಃ ಕಣ್ಮುಚ್ಚಿ ಸುಖನಿದ್ರೆಗೆ ಅಭಿಮನ್ಯು ಜಾರುತ್ತಾನೆ.
ಇದನ್ನೂ ಓದಿ: Mysuru Dussehra: ದಸರಾ ಗಜಪಡೆ ತೂಕ ಪರೀಕ್ಷೆ.. ಕ್ಯಾಪ್ಟನ್ ಅಭಿಮನ್ಯುನೇ ಹೆಚ್ಚು ಬಲಶಾಲಿ