ಆಲಮಟ್ಟಿ ಜಲಾಶಯದ ಒಳಹರಿವು ಧೀಡಿರ್ ಹೆಚ್ಚಳ.. ಅಪಾಯದಲ್ಲಿ ಜನತೆ
🎬 Watch Now: Feature Video
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆ ಹಿನ್ನೆಲೆ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯದಲ್ಲಿ ಏಕಾಏಕಿ ಒಳಹರಿವು ಹೆಚ್ಚಳವಾಗಿದೆ. ಇದಕ್ಕೆ ತಕ್ಕಂತೆ ಕೆಬಿಜೆಎನ್ಎಲ್ ಅಧಿಕಾರಿಗಳು ಸಹ ಎಲ್ಲ 26 ಗೇಟ್ಗಳ ಮೂಲಕ ಹೊರಹರಿವು ಹೆಚ್ಚಳ ಮಾಡಿರುವ ಕಾರಣ ಜಲಾಶಯದ ಕೆಳಭಾಗದ ಗ್ರಾಮಸ್ಥರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಈಗಾಗಲೇ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು, ಗಂಜಿ ಕೇಂದ್ರಗಳನ್ನು ಆರಂಭಿಸುತ್ತಿದ್ದಾರೆ. ಆಲಮಟ್ಟಿ ಡ್ಯಾಂಗೆ ಒಳ ಹರಿವು ಇಂದು ಸಂಜೆ ವೇಳೆಗೆ 1,13,528 ಕ್ಯೂಸೆಕ್ ಒಳಹರಿವು ಇದ್ದು, ಅದರಂತೆ 1,25,000 ಕ್ಯೂಸೆಕ್ ಹೊರ ಹರಿವು ಬಿಡಲಾಗುತ್ತಿದೆ. ಜಲಾಶಯದ ಸಾಮರ್ಥ್ಯ 519.60 ಮೀಟರ್ ಇದ್ದು, ಈಗಾಗಲೇ 517.33 ಮೀಟರ್ ನೀರು ಭರ್ತಿಯಾಗಿದೆ.
Last Updated : Feb 3, 2023, 8:24 PM IST