Watch... ರೈಲು ದುರಂತದ ವೈಮಾನಿಕ ದೃಶ್ಯ...! - ಈಟಿವಿ ಭಾರತ ಕನ್ನಡ
🎬 Watch Now: Feature Video
ಭುವನೇಶ್ವರ್ (ಒಡಿಶಾ): ಬಾಲಸೋರ್ನಲ್ಲಿ ಶುಕ್ರವಾರ ಸಂಭವಿಸಿದ ರೈಲು ದುರಂತ ಇಡಿ ದೇಶವನ್ನೇ ನಡುಗಿಸುವಂತೆ ಮಾಡಿದೆ. ನಿನ್ನೆ ಸಂಜೆ 7 ಗಂಟೆಗೆ ರೈಲುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತರ ಸಂಖ್ಯೆ 238ಕ್ಕೆ ತಲುಪಿದ್ದು, ಸಾವಿರಾರು ಜನ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೆ ಇದೆ. ರೈಲು ದುರಂತದ ದೃಶ್ಯಗಳು ಸೆರೆಯಾಗಿದ್ದು, ದೃಶ್ಯದಲ್ಲಿ ರೈಲು ಬೋಗಿಗಳು ನುಜ್ಜು- ಗುಜ್ಜಾಗಿರುವುದು ಕಂಡು ಬಂದಿದೆ. ಅಪಘಾತದಿಂದಾಗಿ ಆ ಮಾರ್ಗದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಇನ್ನು ಘಟನಾ ಸ್ಥಳದಲ್ಲಿ ಒಡಿಆರ್ಎಫ್, ಎನ್ಡಿಆರ್ಎಫ್, ಅಗ್ನಿಶಾಮಕ ದಳಗಳು ರಕ್ಷಣ ಕಾರ್ಯಾಚರಣೆ ಕೈಗೊಂಡಿವೆ. ಒಟ್ಟು 200 ಆಂಬ್ಯುಲೆನ್ಸ್‌ಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿದ್ದು, ಇವುಗಳಲ್ಲಿ 20 ಕ್ಕೂ ಹೆಚ್ಚು ಸರ್ಕಾರಿ ಆಂಬ್ಯುಲೆನ್ಸ್‌ಗಳಿವೆ. ಇದಲ್ಲದೇ 45 ಸಂಚಾರಿ ಆರೋಗ್ಯ ತಂಡಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಎಸ್‌ಸಿಬಿಯ 25 ವೈದ್ಯರ ತಂಡದೊಂದಿಗೆ 50 ಹೆಚ್ಚುವರಿ ವೈದ್ಯರನ್ನೂ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಬಾಲಸೋರ್‌ನ ಸ್ಥಳೀಯರು ಗಾಯಾಳುಗಳ ಸಹಾಯಕ್ಕೆ ಆಸ್ಪತ್ರೆಗಳತ್ತ ದೌಡಾಯಿಸುತ್ತಿದ್ದಾರೆ. ಅಪಘಾತದ ಗಂಭೀರವಾಗಿ ಗಾಯಗೊಂಡು ಜನರಿಗೆ ರಕ್ತದ ಅವಶ್ಯಕತೆ ಇರುವುದಾಗಿ ತಿಳಿದು ಸ್ಥಳೀಯರು ಆಸ್ಪತ್ರೆಯ ಹೊರಗೆ ಸರತಿ ಸಾಲಿನಲ್ಲಿ ನಿಂತು ರಕ್ತದಾನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬಾಲಸೋರ್ ರೈಲು ಅಪಘಾತ: ತುರ್ತು ಸಭೆ ನಡೆಸಿದ ಪ್ರಧಾನಿ ಮೋದಿ