'ಆದಿತ್ಯ'ನ ಯಶಸ್ವಿಗೆ ಇಸ್ರೋ ವಿಜ್ಞಾನಿಯಿಂದ ’ಬಂಗಾರ ತಿರುಪತಿ‘ಯಲ್ಲಿ ವಿಶೇಷ ಪೂಜೆ -ವಿಡಿಯೋ - ಬಂಗಾರ ತಿರುಪತಿ
🎬 Watch Now: Feature Video
Published : Sep 2, 2023, 1:07 PM IST
ಕೋಲಾರ: ಯಶಸ್ವಿಯಾಗಿ ಸೂರ್ಯನತ್ತ ಆದಿತ್ಯ ಎಲ್-1 ರಾಕೆಟ್ ಉಡ್ಡಯನಗೊಂಡಿದೆ. ಸೂರ್ಯನತ್ತ ಭಾರತದ ಆದಿತ್ಯ ಎಲ್-1 ಉಡಾವಣೆ ಹಿನ್ನಲೆ ಕೋಲಾರದಲ್ಲಿ ಇಸ್ರೋ ವಿಜ್ಞಾನಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ 'ಬಂಗಾರ ತಿರುಪತಿ'ಯಲ್ಲಿ ಇಸ್ರೋ ವಿಜ್ಞಾನಿ ವಿಶ್ವನಾಥ್ ಎಂಬುವರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದರು.
ವಿಶ್ವನಾಥ್ ಅವರು ಮೂಲತಃ ಮಾಲೂರು ತಾಲೂಕಿನ ಲಕ್ಕೂರು ಹೋಬಳಿಯ ಪುರ ಗ್ರಾಮದ ಇಸ್ರೋ ವಿಜ್ಞಾನಿಯಾಗಿದ್ದಾರೆ. ಶ್ರಾವಣ ಶನಿವಾರದಲ್ಲಿ ಬಂಗಾರ ತಿರುಪತಿಗೆ ಬರುವ ವಾಡಿಕೆ ಇತ್ತು. ಅದರಂತೆ ಇಂದು ಮೂರನೇ ಶನಿವಾರದ ಹಿನ್ನಲೆ ಜೊತೆಗೆ ಇಂದು ಆದಿತ್ಯ ಎಲ್ -1 ಉಡಾವಣೆ ಹಿನ್ನೆಲೆ ಬಂಗಾರ ತಿರುಪತಿಯ ನೇತ್ರ ವೆಂಕಟರಮಣ ದೇವಾಲಯದಲ್ಲಿ ಪೂಜೆ ಸಲ್ಲಿಸುವುದರೊಂದಿಗೆ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ, ಸ್ಥಳದಲ್ಲಿದ್ದವರು ಸಹ ಆದಿತ್ಯ ಎಲ್-1 ಯಶಸ್ವಿಗೆ ಶುಭ ಕೋರಿದರು.
ಆದಿತ್ಯನ ಯಶಸ್ವಿಗೆ ಧಾರವಾಡದಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ, ವಿದ್ಯಾರ್ಥಿಗಳಿಂದ ಮತ್ತು ಚಾಮರಾಜನಗರದಲ್ಲಿ ಯೋಗಪಟುಗಳಿಂದ ಸೂರ್ಯನಮಸ್ಕಾರ ಮಾಡಿ ಹಾರೈಸಿದ್ದಾರೆ. ಯೋಗ ಪಟುಗಳು ಒಟ್ಟು 108 ಸೂರ್ಯ ನಮಸ್ಕಾರ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಆದಿತ್ಯ ಎಲ್1 ರಾಕೆಟ್ ಯಶಸ್ವಿಯಾಗಿ ಉಡ್ಡಯನ ..