ಗುಂಡ್ಲುಪೇಟೆಯಲ್ಲಿ ಸುದೀಪ್ ರೋಡ್ ಶೋ: ಮತಬೇಟೆಯಲ್ಲಿ 'ವೀರ ಮದಕರಿ' ಸಿನಿಮಾ ಡೈಲಾಗ್
🎬 Watch Now: Feature Video
ಚಾಮರಾಜನಗರ : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳ ಚುನಾವಣಾ ಪ್ರಚಾರ ಬಿರುಸುಗೊಂಡಿದೆ. ಇಂದು ಗುಂಡ್ಲುಪೇಟೆಯಲ್ಲಿ ನಟ ಸುದೀಪ್ ಭರ್ಜರಿ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿ ನಿರಂಜನ ಕುಮಾರ್ ಪರ ಮತಬೇಟೆ ನಡೆಸಿದರು. "ಗೆದ್ದೇ ಗೆಲ್ಲುವೆವು ನಾವು ಒಂದು ದಿನ, ಗೆಲ್ಲಲೇಬೇಕು ಒಳ್ಳೆತನ. ನೆವರ್ ಗಿವ್ ಅಪ್ ರೀತಿ ಸತತವಾಗಿ ಸೋತರೂ ಗೆದ್ದ ನಿರಂಜನ ಕುಮಾರ್ ಅವರನ್ನು ಈ ಬಾರಿಯೂ ನೀವು ಗೆಲ್ಲಿಸಿಕೊಡಬೇಕು" ಎಂದು ಕಿಚ್ಚ ಮನವಿ ಮಾಡಿದರು.
ಇನ್ನು ನೆಚ್ಚಿನ ನಟನನ್ನು ನೋಡಲು ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ಬಳಿಕ ಅಭಿಮಾನಿಗಳು ಕಿಚ್ಚ, ಕಿಚ್ಚ ಎಂದು ಘೋಷಣೆ ಕೂಗುತ್ತಿದ್ದಂತೆ ವೀರ ಮದಕರಿ ಸಿನಿಮಾ ಡೈಲಾಗ್ ಹೊಡೆದು ಸುದೀಪ್ ಅಭಿಮಾನಿಗಳ ಮನ ಗೆದ್ದರು. ಗುಂಡ್ಲುಪೇಟೆ ಬಳಿಕ ಚಾಮರಾಜನಗರ, ಕೊಳ್ಳೇಗಾಲ ಹಾಗೂ ಹನೂರಲ್ಲಿ ಕಿಚ್ಚ ಮತಬೇಟೆ ನಡೆಸಲಿದ್ದಾರೆ.
ಇದನ್ನೂ ಓದಿ : ಚಾಮರಾಜಪೇಟೆಯಲ್ಲಿ ತ್ರಿಕೋನ ಸ್ಪರ್ಧೆ: ಜಮೀರ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕುತ್ತಾ ಬಿಜೆಪಿ, ಜೆಡಿಎಸ್?